Kannada NewsKarnataka NewsLatest

ಶಾಸಕ ಬೆನಕೆ ಸೇರಿದಂತೆ 27 ಜನರ ವಿರುದ್ಧ FIR ದಾಖಲು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆ ಇದೀಗ ನಾಯಕರ ವಿರುದ್ಧವೇ ಕೇಸ್ ದಾಖಲಾಗುತ್ತಿದೆ.

ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಎಮ್ಮೆ ಓಡಿಸುವ ಸ್ಪರ್ಧೆ, ಪಟ್ಟಾಭಿಷೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶಾಸಕ ಅನಿಲ ಬೆನಕೆ ಸೇರಿದಂತೆ 27 ಜನರ ವಿರುದ್ಧ ಬೆಳಗಾವಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಕೋವಿಡ್ ನಿಯಮ ಜಾರಿಯಲ್ಲಿದ್ದರೂ ಶಾಸಕರು ಎಮ್ಮೆ ಓಡಿಸುವ ಸ್ಪರ್ಧೆ, ಧರ್ಮವೀರ ಸಂಭಾಜಿ ಪಟ್ಟಾಭಿಷೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಜನರು ಗುಂಪು ಸೇರುವಂತೆ ಮಾಡಿದ್ದರು. ಸರ್ಕಾರ ಜಾರಿಗೆ ತಂದಿರುವ ಕೋವಿಡ್ ನಿಯಮಗಳನ್ನು ಬಿಜೆಪಿ ಶಾಸಕರೇ ಉಲ್ಲಂಘನೆ ಮಾಡುತ್ತಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು.

ಈ ಮೊದಲು ಆಯೋಜಕರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದ ಪೊಲೀಸರು ವಿಡೀಯೋ ದಾಖಲೆಗಳನ್ನು ಪರಿಶೀಲಿಸಿದ ನಂತರ ಶಾಸಕರೂ ಸೇರಿದಂತೆ ಇತರ 27 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆನಕೆ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಎಫ್ ಐಆರ್ ದಾಖಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಡ ಕೇಳಿ ಬಂದಿತ್ತು. ಕಾಂಗ್ರೆಸ್ ನಿಯೋಗ ಮುಖ್ಯಕಾರ್ಯದರ್ಶಿಗೆ ದೂರು ಸಲ್ಲಿಸಿತ್ತು. ಪ್ರಗತಿವಾಹಿನಿ ಕೂಡ ವರದಿ ಪ್ರಕಟಿಸಿತ್ತು.

 

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿದ ಒತ್ತಡ: ಶಾಸಕ ಅನಿಲ ಬೆನಕೆ ವಿರುದ್ಧ ದಾಖಲಾಗುತ್ತಾ FIR?

 

ಅನಿಲ ಬೆನಕೆ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ಸಿಎಸ್ ಗೆ ಕಾಂಗ್ರೆಸ್ ದೂರು

 

ಭೀಕರ ರಸ್ತೆ ಅಪಘಾತ; ಯಕ್ಷಗಾನ ಕಲಾವಿದ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button