ಕಾಲೇಜು ಆವರಣದಲ್ಲಿ ಸ್ವಚ್ಚತಾ ಅಭಿಯಾನ ನಡೆಸಿದ ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಶಾಸಕ ಅನಿಲ ಬೆನಕೆ ನಗರದ 2000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು.
ಅಲ್ಲಿನ ಮೂಲಭೂತ ಸೌಲಭ್ಯಳಾದ ಶೌಚಾಲಯ , ಕಟ್ಟಡ ದುರಸ್ತಿ ಕಾಮಗಾರಿ ಸಮಸ್ಯೆ, ಕಾಲೇಜು ಆವರಣ ಸ್ವಚ್ಚತೆ ಹಾಗೂ ಇನ್ನಿತರೆ ಮೂಲಭೂತ ಸೌಲಭ್ಯಗಳಿಂದ ಕಾಲೇಜಿನ ಅಭಿವೃದ್ಧಿಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಕಡೆಗಣಿಸಲಾಗಿತ್ತು ಎಂದು ಅಪಾಧಿಸಿದರು.
ಶನಿವಾರದಂದು ಕಾಲೇಜಿನ ಆವರಣದಲ್ಲಿ ಸ್ವಚ್ಚತಾ ಅಭಿಯಾನವನ್ನು ನಡೆಸುವುದರೊಂದಿಗೆ ಕಾಲೇಜಿನ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಹೇಳಿ ಇಂದು ಶಾಸಕ ಅನಿಲ ಬೆನಕೆ ಬೆಳಿಗ್ಗೆ 10.30 ಕ್ಕೆ ಕಾಲೇಜು ಆವರಣದಲ್ಲಿ ಸ್ವಚ್ಚತಾ ಅಭಿಯಾನವನ್ನು ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕಾಲೇಜಿನಲ್ಲಿರುವ ಶೌಚಾಲಯಗಳನ್ನು ಸಿಕಿಂಗ್ ಮಷಿನ್‍ನಿಂದ ಸ್ವಚ್ಚಗೊಳಿಸಿದರು ಹಾಗೂ ಆವರಣವನ್ನು 2 ಜೆ.ಸಿ.ಬಿ ಗಳಿಂದ ಚಿಪಿಂಗ್ ಕಡಿಯನ್ನು ಹಾಕಿ ಸ್ವಚ್ಚಗೊಳಿಸಿದರು.
ಸ್ವಚ್ಚತಾ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಕಾಲೇಜಿನ ವಿದ್ಯಾರ್ಥಿಗಳ ಮನವಿಯಂತೆ ನಿನ್ನೆಯ ದಿನ ಖುದ್ದು ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ನಿವಾರಿಸುವುದಾಗಿ ಹೇಳಿದ್ದರಿಂದ ಆ ಮಾತಿನಂತೆ ಇಂದು ಕಾಲೇಜು ಆವರಣದಲ್ಲಿ ಸ್ವಚ್ಚತಾ ಅಭಿಯಾನವನ್ನು ನಡೆಸಿ ಶೌಚಾಲಯಗಳನ್ನು ಹಾಗೂ ಕಾಲೇಜು ಆವರಣವನ್ನು ಸ್ವಚ್ಚಗೊಳಿಸಲಾಗುತ್ತಿದೆ.
ಹಿಂದಿನ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಕ್ಷೇತ್ರದಲ್ಲಿ ಅಭಿವೃಧ್ದಿಯು ಕುಂಠಿತಗೊಂಡಿದ್ದು, ಈಗಿನ ನಮ್ಮ ಸರ್ಕಾರದ ಅವಧಿಯಲ್ಲಿ ಅಭಿವೃದ್ದಿಯ ವೇಗವನ್ನು ಹೆಚ್ಚಿಸಲಾಗುವುದು ಎಂದರು.
ಕಾಲೇಜಿನಲ್ಲಿರುವ ಈಗಿನ ಶೌಚಾಲಯಗಳನ್ನು ತೆರವುಗೊಳಿಸಿ ಕಟ್ಟಡ ದುರಸ್ಥಿ ಕಾಮಗಾರಿಗೆ ಮೀಸಲಿಡಲಾದ ಅನುದಾನದಲ್ಲಿ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ನನ್ನ ಮತಕ್ಷೇತ್ರದಲ್ಲಿನ ಎಲ್ಲ ಕಾಲೇಜು ಹಾಗೂ ಶಾಲೆಗಳ ಅಭಿವೃಧ್ದಿಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರಲ್ಲದೆ ಸ್ವಚ್ಚತಾ ಅಭಿಯಾನದಲ್ಲಿ ಬಾಗಿಯಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ