ಸ್ಮಾರ್ಟ್ ಕ್ಲಾಸ್ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನಗರದ ವಂಟಮೂರಿಕಾಲೊನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 33 ರಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಶಂಕು ಸ್ಥಾಪನೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬೆಳಗಾವಿ ನಗರದ ವಂಟಮೂರಿಕಾಲೊನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಆಯ್ಕೆಯಾಗಿದ್ದು ಅದರಂತೆಯೇ ಸ್ಮಾರ್ಟ್ ಕ್ಲಾಸ್ ನಿರ್ಮಾಣದ ಶಂಕು ಸ್ಥಾಪನೆಯನ್ನು ನೆರವೇರಿಸಲಾಗುತ್ತಿದೆ ಎಂದರು.
ಹಾಗೂ ಸ್ಮಾರ್ಟ್ ಕ್ಲಾಸ್ ಯೋಜನೆಯಲ್ಲಿ ಅದರಲ್ಲಿ 20 ಕಂಪ್ಯೂಟರಗಳು, ಕಂಪ್ಯೂಟರಗಳಲ್ಲಿ ಇ-ಲೈಬ್ರರಿ ವ್ಯವಸ್ಥೆ ಹೊಂದಿದ್ದು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕುಳಿತುಕೊಳ್ಳಲು ಸುಸಜ್ಜಿತ ಖುರ್ಚಿಗಳು, ಸ್ಮಾರ್ಟ್ ಬೋರ್ಡ ಹಾಗೂ 4 ಭಾಷೆಗಳಿಂದ ಭೋದನೆ ಮಾಡಬಹುದಾದ ಅತ್ಯಾಧುನಿಕ ಎಲ್.ಇ.ಡಿ ಟಚ್ ಸ್ಕ್ರೀನ್ ಬೋರ್ಡ ವ್ಯವಸ್ಥೆ ಒಳಗೊಂಡಿದೆ ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಇದರ ಸುಪಯೋಗವನ್ನು ಪಡೆದುಕೊಳ್ಳುವಂತೆ ಹೇಳಿದರು. ಮುಂದಿನ ದಿನಗಳಲ್ಲಿ ಮತಕ್ಷೇತ್ರದ ಎಲ್ಲ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ದಿನೇಶ ನಾಶಿಪುಡಿ ಮಾಜಿ ನಗರ ಸೇವಕರು, ಕೆ.ಡಿ.ಬಡಿಗೇರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನದಾಪ ಸಿ.ಡಿ.ಪಿ.ಓ ಅಧಿಕಾರಿ, ಎಲ್ ಬಿ. ಪಾಟೀಲ ಸರಕಾರಿ ವಕೀಲರು, ಮುರಘೇಂದ್ರಗೌಡ ಪಾಟೀಲ ವಕೀಲರು, ದತ್ತಾ ಬಿಲಾವರ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಜ್ಯೋತಿಕುಮಾರ ಹುಲೆನ್ನವರ ಎಸ್.ಡಿ.ಎಮ್.ಸಿ ಉಪಾಧ್ಯಕ್ಷರು, ಮಾರುತಿ ರಂಗಾಪೂರಿ ಗುತ್ತಿಗೆದಾರರು, ಶಾಹುರಾಜ ಸಮಾಜಿಕ ಕಾರ್ಯಕರ್ತರು, ರುಕ್ಕಯ್ಯ ಬಾದಾಮಿ ಸಹಾಯಕ ಅಭಿಯಂತರರು ಸ್ಮಾರ್ಟ ಸಿಟಿ, ಅಭಿಷೇಕ ಸ್ಮಾರ್ಟ್ ಸಿಟಿ ಯೋಜನಾಧಿಕಾರಿ ಅಭಿಯಂತರರು, ಎಸ್. ಟಿ. ಕೋಲಕಾರ ಶಾಲೆಯ ಪ್ರಧಾನ ಗುರುಗಳು, ದೇಶನೂರ ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ