Latest

2000 ಕೋಟಿ ಹೊಸ ಬಾಂಬ್ ಸಿಡಿಸಿದ ಯತ್ನಾಳ್…!

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರರಾದ ಬಿ.ವೈ ವಿಜಯೇಂದ್ರ, ರಾಘವೇಂದ್ರ ದೆಹಲಿ ಭೇಟಿ ವಿಚಾರದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೆಹಲಿಗೆ ಹೋಗಿ 2000 ಕೋಟಿ ಕೊಡುತ್ತೇವೆ ನಮ್ಮನ್ನು ಸಿಎಂ ಮಾಡಿ ಎಂದಿದ್ದಾರೆ ಎಂದು ಹೊಸ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಯಾರ್ಯಾರೋ ದೆಹಲಿಗೆ ಹೋಗುತ್ತಾರೆ ಬೇರೆ ಬೇರೆ ರೀತಿಯ ಆಮಿಷಗಳನ್ನು ಒಡ್ಡಿ ಸಿಎಂ ಮಾಡಿ ಎನ್ನುತ್ತಾರೆ. 2000 ಕೋಟಿ ಕೊಡ್ತೀವಿ ನಮ್ಮನ್ನು ಸಿಎಂ ಮಾಡಿ ಎಂದು ಆಮಿಷ ಒಡ್ಡಿದ್ದಾರೆ ಆದರೆ ನಮ್ಮ ಬಿಜೆಪಿ ಅಂತಹ ಪಕ್ಷವಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದಲ್ಲಿ ಎಲ್ಲಾ ಸಮುದಾಯದವರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ದಲಿತರು, ಹಿಂದುಳಿದವರು, ಮಹಿಳೆಯರು ಹೀಗೆ ಎಲ್ಲರಿಗೂ ಅವಕಾಶ ನೀಡಿದ್ದಾರೆ. ಹೀಗಿರುವಾಗ ಯಾರೋ 2000 ಕೋಟಿ ಕೊಡುತ್ತೇವೆ ಸಿಎಂ ಮಾಡಿ ಎಂದರೆ ಕಪಾಳಕ್ಕೆ ಬಾರಿಸಿ ಕಳಿಸ್ತಾರೆ ಎಂದು ತಿಳಿಸಿದರು.
ಕುತೂಹಲ ಮೂಡಿಸಿದ ಶಾಸಕಾಂಗ ಪಕ್ಷದ ಸಭೆ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button