
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮನಕ್ಕೆ ವ್ಯಂಗ್ಯವಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಷ್ಟೊಂದು ಬಿಲ್ಡಪ್ ಕೊಡಲು ಅವರೇನು ಪ್ರಧಾನ ಮಂತ್ರಿನಾ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಯತ್ನಾಳ್, ನಾಯಕತ್ವ ಬದಲಾವಣೆ ವಿಚಾರವಾಗಿ ಅರುಣ್ ಸಿಂಗ್ ಏನು ಹೇಳುತ್ತಾರೆ ಎಂಬುದು ಅವರು ಬರುವ ಮೊದಲೇ ಗೊತ್ತಿತ್ತು. ಅಷ್ಟಕ್ಕೂ ಅವರು ಏನು ಹೇಳಬೇಕು ಎಂಬುದನ್ನು ಏರ್ ಪೋರ್ಟ್ ಗೆ ಬಂದ ತಕ್ಷಣ ಹೇಳಿದರು. ಇದೆಲ್ಲ ಗೊತ್ತಿದ್ದೇ ನಾನು ಅವರನ್ನು ಭೇಟಿಯಾಗಿಲ್ಲ ಎಂದರು.
ಅರುಣ್ ಸಿಂಗ್ ಏರ್ ಪೋರ್ಟ್ ಗೆ ಬಂದಿಳಿದಿದ್ದೇನು? ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಕೈಬೀಸಿದ್ದೇನು? ಅವರೇನು ಪ್ರಧಾನ ಮಂತ್ರಿನಾ ಆ ಲೆವಲ್ ನಲ್ಲಿ ಬಿಲ್ಡಪ್ ಕೊಡಲು? ಎಲ್ಲವನ್ನೂ ಗಮನಿಸಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಸಿಎಂ ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಯತ್ನಾಳ್, ಹಾಲಿ ಸಿಎಂಗಳು ಜೈಲಿಗೆ ಹೋಗಿರುವ ಇತಿಹಾಸವಿದೆ. ಅದು ಮತ್ತೆ ಮರುಕಳಿಸಬಾರದು. ಪದೇ ಪದೇ ತಪ್ಪು ಮಾಡಿದರೆ ಸಹಿಸಲು ಸಾಧ್ಯವಿಲ್ಲ. ವಿಜಯೇಂದ್ರ ಎಲ್ಲರನ್ನೂ ಮ್ಯಾನೇಜ್ ಮಾಡ್ತಿದ್ದಾರೆ. ದುಷ್ಟರಿಗೂ ಒಂದು ಕಾಲವಿದೆ, ಆದರೆ ಅದು ಯಾವಾಗಲೂ ನಡೆಯಲ್ಲ. ನಮ್ಮ ಪ್ರಧಾನಮಂತ್ರಿಗಳು ಭ್ರಷ್ಟಾಚಾರಕ್ಕೆ ಮಣೆ ಹಾಕಲ್ಲ ಎಂಬ ವಿಶ್ವಾಸವಿದೆ. ಎಲ್ಲದಕ್ಕೂ ಕಾಲ ಕೂಡಿಬರಬೇಕು ಎಂದು ಹೇಳಿದರು.
ಗಾಂಜಾ ಸಾಗಾಟ; ವೈದ್ಯೆ ಸೇರಿ ಇಬ್ಬರು ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ