ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಯತ್ನಾಳ್ ನಾಲಾಯಕ್ ರಾಜಕಾರಣಿ ಎಂಬ ಹೇಳಿಕೆ ನೀಡಿದ್ದ ಸಚಿವ ಮುರುಗೇಶ್ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಾರು ನಾಲಾಯಕ್ ಎಂದು ಪ್ರಶ್ನಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಜಿ.ಟಿ.ಪಾಟೀಲ್ ಸಿಡಿ, ಹೆಚ್.ವೈ.ಮೇಟಿ ಸಿಡಿ ಮಾಡಿದವರು ಯಾರು? ಸಪ್ಲೈ ಮಾಡಿದವರು ಅವರು ನಾಲಾಯಕ್. ನಾನು ಮಂತ್ರಿಯಾಗಲು ಯಾರ ಕಾಲು ಹಿಡಿದಿಲ್ಲ, ಪರಿಷತ್ ಸದಸ್ಯನಾಗಲೂ ಯಾರ ಕಾಲನ್ನು ಹಿಡಿದಿಲ್ಲ. ಬ್ಲ್ಲ್ಯಾಕ್ ಮೇಲ್ ಮಾಡಿ ಇಂದು ಹಲವರು ಮಂತ್ರಿಯಾಗಿದ್ದಾರೆ. ಅಂತಹ ನಾಲಾಯಕ್ ರಿಂದ ನಾನು ಏನೂ ಕಲಿಯಬೇಕಿಲ್ಲ ಎಂದು ಹೇಳಿದರು.
ಯಾರು ನಾಲಾಯಕ್ ಎಬುದು ಎಲ್ಲರಿಗೂ ಗೊತ್ತಿದೆ. ಯಾರು ಯಾರಿಗೆ ಏನು ಸಪ್ಲೈ ಆಗಿದೆ? ಮೇಲಿನವರಿಗೆ ಏನೇನು ಸಪ್ಲೈ ಮಾಡಿದ್ದಾರೆ ಎಲ್ಲವನ್ನೂ ಕಾಲ ಬಂದಾಗ ಹೇಳುತ್ತೇನೆ ಎಂದು ಗುಡುಗಿದರು.
ಸಿಡಿ ಯುವತಿಯಿಂದ ಪೊಲೀಸ್ ಆಯುಕ್ತರಿಗೆ ಪತ್ರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ