
ಪ್ರಗತಿವಾಹಿನಿ ಸುದ್ದಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಕೇಸ್ ಬಗ್ಗೆ ತನಿಖೆ ಚುರುಕುಗೊಳಿಸಿರುವ ಇಡಿ ಅಧಿಕಾರಿಗಳು ಕೊನೆಗೂ ಶಾಸಕ ಬಸನಗೌಡ ದದ್ದಲ್ ಗೆ ವಿಚಾರಣೆಗೆ ಕರೆಸಿಕೊಂಡಿದ್ದಾರೆ.
ಈ ಹಿಂದೆ ವಿಚಾರಣೆಗೆ ಬರಬೇಕು ಎಂದು 3 ಬಾರಿ ಇಡಿ ನೋಟಿಸ್ ನೀಡಿದ್ದರೂ ದದ್ದಲ್ ಹಾಜರಾಗದೇ ನಾಪತ್ತೆಯಾಗಿದ್ದರು. ಬಳಿಕ ಅಧಿವೇಶನದ ಮೊದಲ ದಿನವೇ ವಿಧಾನಸೌಧದಲ್ಲಿ ಪ್ರತ್ಯಕ್ಷವಾಗಿದ್ದು ಗೊತ್ತೇ ಇದೆ.
ಹಗರಣಕ್ಕೆ ಸಂಬಂಧಿಸಿ ಇಂದು ಕೊನೆಗೂ ಶಾಂತಿ ನಗರದ ಇಡಿ ಕಚೇರಿಯಲ್ಲಿ ದದ್ದಲ್ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರರಕಣದಲ್ಲಿ ದದ್ದಲ್ ಅವರ ಕೈವಾಡ ಇರುವ ಬಗ್ಗೆ ನಿನ್ನೆಯಷ್ಟೇ ಇಡಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಶಂಕೆ ವ್ಯಕ್ತಪಡಿಸಿತ್ತು. ಇದಲ್ಲದೇ ಈ ಹಿಂದೆ ದದ್ದಲ್ ಮನೆಯಲ್ಲಿ ಇಡಿ ಅಧಿಕಾರಿಗಳು ರೇಡ್ ಮಾಡಿದ್ದಾಗ, ಹಣ ವರ್ಗಾವಣೆಗೆ ಸಂಬಂಧಿಸಿ ಅನೇಕ ಪೂರಕ ದಾಖಲೆಗಳನ್ನೂ ಸಂಗ್ರಹಿಸಿದ್ದರು ಎಂದು ವರದಿಯಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ