Latest

ಅಂಡರ್ ವೇರ್, ಬನಿಯನ್ ಧರಿಸಿ ರೈಲಿನಲ್ಲಿ ಓಡಾಡಿದ ಶಾಸಕ

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ರೈಲಿನಲ್ಲಿ ಜೆಡಿಯು ಶಾಸಕರೊಬ್ಬರು ಕೇವಲ ಒಳಡುಪು ಧರಿಸಿ ಓಡಾಡಿರುವ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಶಾಸಕರ ವರ್ತನೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಬಿಹಾರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಅಂಡರ್ ವೇರ್, ಬನಿಯನ್ ಧರಿಸಿ ತೇಜಸ್ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಎಸಿ ಫಸ್ಟ್ ಕ್ಲಾಸ್ ಕಂಪಾರ್ಟ್ ಮೆಂಟ್ ನಲ್ಲಿ ಓಡಾಡಿದ್ದಾರೆ. ಶಾಸಕರು ರೈಲಿನಲ್ಲಿ ಅರೆನಗ್ನರಾಗಿ ಓಡಾದುತ್ತಿರುವುದನ್ನು ಕಂಡು ಸಹಪ್ರಯಾಣಿಕರು ಜಗಳವಾಡಿದ್ದಾರೆ. ಅಲ್ಲದೇ ವಿಡಿಯೋ ಸಮೇತ ವೈರಲ್ ಮಾಡಿದ್ದಾರೆ.

ಶಾಸಕರ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಷ್ಟನೆ ನೀಡಿರುವ ಶಾಸಕ ಗೋಪಾಲ್ ಮಂಡಲ್, ಪಾಟ್ನಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ನನಗೆ ಹೊಟ್ಟೆ ಸರಿ ಇರಲಿಲ್ಲ, ಅರ್ಜಂಟಾಗಿ ಟಾಯ್ಲೆಟ್ ಗೆ ಹೋಗಬೇಕಾಗಿತ್ತು. ಹೀಗಾಗಿ ಪ್ಯಾಂಟ್, ಶರ್ಟ್ ನ್ನು ಕಂಪಾರ್ಟ್ ಮೆಂಟ್ ನಲ್ಲಿ ಬಿಚ್ಚಿಟ್ಟು ಟಾಯ್ಲೆಟ್ ಕಡೆ ಹೋಗುವಾಗ ಟವೆಲ್ ಸುತ್ತಿಕೊಳ್ಳಲು ಮರೆತು ಹೆಗಲ ಮೇಲೆ ಹಾಕಿಕೊಂಡಿದ್ದೆ. ಸೊಂಟಕ್ಕೆ ಸುತ್ತಿಕೊಳ್ಳಲು ನೆನಪಾಗಲಿಲ್ಲ ಎಂದು ಹೇಳಿದ್ದಾರೆ.

ಸಹ ಪ್ರಯಾಣಿಕರು ಜಗಳವಾಡಿ ದೊಡ್ಡ ವಿಷಯ ಮಾಡಿದ್ದಾರೆ. ನಾನು ಟಾಯ್ಲೆಟ್ ಗೆ ಹೋಗಿ ಬರುವಷ್ಟರಲ್ಲಿ ಪೊಲೀಸರನ್ನು ಕರೆಸಿದ್ದಾರೆ. ಬಳಿಕ ನಾನೇ ಪ್ರಯಾಣಿಕರಿಗೆ ಕ್ಷಮೆಯಾಚಿಸಿದ್ದೇನೆ. ವಿಷಯ ಇಲ್ಲಿಗೆ ನಿಲ್ಲಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಮತ್ತೋರ್ವ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button