Latest

ಹಾಲಿ ಶಾಸಕರಿಂದ ಮಾಜಿ ಶಾಸಕರ ಹತ್ಯೆಗೆ ಸುಪಾರಿ; ಸುರೇಶ್ ಗೌಡ ಗಂಭೀರ ಆರೋಪ

ಪ್ರಗತಿವಾಹಿನಿ ಸುದ್ದಿ; ತುಮಕೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಆರೋಪ ಪ್ರತ್ಯಾರೋಗಳಲ್ಲಿ ತೊಡಗಿದ್ದು, ಹಾಲಿ ಶಾಸಕರಾದ ಗೌರಿಶಂಕರ್ ವಿರುದ್ಧ ಮಾಜಿ ಶಾಸಕರಾದ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ತುಮಕೂರು ಜಿಲ್ಲೆಯ ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ನನ್ನ ಹತ್ಯೆಗೆ ಸುಪಾರಿಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ಜೈಲಿನಲ್ಲಿರುವ ಶಾಸಕರ ಬಲಗೈ ಬಂಟನನ್ನು ಸಂಪರ್ಕಿಸಿ 5 ಕೋಟಿ ರೂಪಾಯಿಗೆ ಸೂಪಾರಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿರೇಹಳ್ಳಿ ಮಹೇಶ್ ಎಬುವವನಿಗೆ ಸುಪಾರಿ ನೀಡಿದ್ದಾರೆ. ವಿಜಯದಶಮಿ ಹಬ್ಬದ ಹಿಂದಿನ ದಿನವೇ ಈ ಬಗ್ಗೆ ನಾನು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದೆ. ಪೊಲೀಸ್ ಕಮಿಷ್ನರ್ ಅವರಿಗೂ ದೂರು ಕೊಟ್ಟಿದ್ದೇನೆ. ಕಳೆದ ನಾಲ್ಕು ತಿಂಗಳಿಂದ ನನ್ನ ಕೊಲೆಗೆ ಸಂಚು ನಡೆಸಲಾಗುತ್ತಿದೆ. ಗುಪ್ತಚರ ಇಲಾಖೆಯಿಂದಲೂ ನನಗೆ ಮಾಹಿತಿ ಬಂದಿದೆ ಎಂದು ಸುರೇಶ್ ಗೌಡ ತಿಳಿಸಿದ್ದಾರೆ.

ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಕಾನ್ಸ್ ಟೇಬಲ್

Home add -Advt

https://pragati.taskdun.com/lokayukta-raiddevanahallivijayapurapolice-stationconstable-arrest/

Related Articles

Back to top button