ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆ ಎಚ್ ಗ್ರಾಮದ ಜ್ಯೋತಿ ನಗರ ಹಾಗೂ ರಾಮನಗರದ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕಾಗಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ 3.50 ಕೋಟಿ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಶುಕ್ರವಾರ ಭೂಮಿ ಪೂಜೆಯನ್ನು ಕೈಗೊಂಡು, ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು.
ಕಳೆದ 5 ವರ್ಷಗಳಿಂದಲೂ ಅವಿಶ್ರಾಂತವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡುತ್ತ ಬಂದಿದ್ದೇನೆ. ರಾಜ್ಯದ ಬೇರೆ ಯಾವುದೇ ಕ್ಷೇತ್ರದಲ್ಲೂ ಆಗದಷ್ಟು ಸಂಖ್ಯೆಯ ಕಾಮಗಾರಿಗಳನ್ನು ಸರಕಾರದ ಅನುದಾನ, ಲಕ್ಷ್ಮೀತಾಯಿ ಫೌಂಡೇಶನ್ ಅನುದಾನ ಹಾಗೂ ಸ್ವಂತ ನಿಧಿಯಿಂದ ಮಾಡಿದ್ದೇನೆ. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ, ಪ್ರೋತ್ಸಾಹದ ಕಾರಣದಿಂದಾಗಿ ಇಷ್ಟೊಂದು ದಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲು ಅವಕಾಶವಾಗಿದೆ. ಕ್ಷೇತ್ರದ ಹೊರಗಿನ ಕೆಲವರು ಕೇವಲ ರಾಜಕೀಯ ಕಾರಣಕ್ಕಾಗಿ ಟೀಕೆಗಳನ್ನು ಮಾಡಿದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ದೇವರು ಮತ್ತು ಕ್ಷೇತ್ರದ ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಅವರೆಂದೂ ನನ್ನ ಕೈಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಜ್ಯೋತಿ ಪಾಟೀಲ, ಯುವರಾಜ ಕದಂ, ಲತಾ ಪಾಟೀಲ, ಕೆಂಪಣ್ಣ ಸನದಿ, ಮೋಹನ ಕಾಂಬಳೆ, ಆನಂದ ಭಜಂತ್ರಿ, ಮೀನಾಕ್ಷಿ ಮುತಗೇಕರ್, ಪೂನಂ ಬೆನ್ನಾಳಕರ್, ರಾಹುಲ್ ಪಾಟೀಲ, ವಿಶಾಲ ಬೋಸ್ಲೆ, ಮೋಹನ ಪಾಟೀಲ, ನಿಲೇಶ್ ಕಿಲ್ಲೇಕರ್, ಪಿಂಟು ರಾಜಗೋಳ್ಕರ್ ಮುಂತಾದವರು ಉಪಸ್ಥಿತರಿದ್ದರು.
https://pragati.taskdun.com/d-k-shivakumarcbi-casehigh-courtrelief/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ