Kannada NewsKarnataka NewsLatest

ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿರುವುದು ನಮ್ಮ ಪುಣ್ಯ ಎಂದ ಶಾಸಕಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಪರಿಹಾರಗಳನ್ನು ಒದಗಿಸುವ ಪ್ರಯತ್ನ ಮಾಡಿದರು.
ಕಂಗ್ರಾಳಿ ಕೆ ಎಚ್ ಗ್ರಾಮದ ಸ್ಥಳೀಯ ಜನ ಪ್ರತಿನಿಧಿಗಳು ​ಶಾಸಕರನ್ನು ಭೇಟಿ ಮಾಡಿ ಗ್ರಾಮದ ಅನೇಕ ಅಭಿವೃದ್ಧಿಯ ಕೆಲಸಗಳ ಕುರಿತು ಚರ್ಚಿಸಿದರು.
​ ಗ್ರಾಮದ ಶಿವಾಜಿ ಮೂರ್ತಿಯಿಂದ ಕಲ್ಮೇಶ್ವರ ನಗರವರೆಗೆ ಸಿ ಸಿ ರಸ್ತೆಯ ನಿರ್ಮಾಣ, ಸ್ಮಶಾನ ಭೂಮಿಯ ಸಲುವಾಗಿ ಪ್ರತ್ಯೇಕ ಸ್ಥಳ ಮಂಜೂರು, ನಾರಾಯಣ ಗಲ್ಲಿಯ ಮಂಗಲ ಕಾರ್ಯಾಲಯದಿಂದ ಕಾಳಾ ಕಟ್ಟಾವರೆಗೆ ಚರಂಡಿ ನಿರ್ಮಾಣ ಮತ್ತು ರೈತರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಕಾಳಾ ಕಟ್ಟಾ ಹತ್ತಿರ ಬ್ರಿಡ್ಜ್ ನಿರ್ಮಾಣ ​ಕುರಿತು ಚರ್ಚಿಸಿದರು​.​ ​ 
ಅವರ ಮನವಿಗೆ ಸ್ಪಂದಿಸಿ​ದ ಲಕ್ಷ್ಮಿ ಹೆಬ್ಬಾಳಕರ್,​ ಆದಷ್ಟು ಬೇಗ​ ಗ್ರಾಮದಲ್ಲಿ​ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವುದಾಗಿ ಭರವಸೆಯನ್ನು​ ನೀಡಿದರು.
​ 
ಬಾಮನವಾಡಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಸದಸ್ಯರು ​ ಶಾಸಕರನ್ನು ಭೇಟಿ ಮಾಡಿ ಗ್ರಾಮದಲ್ಲಿ ನೂತನವಾಗಿ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿ ಕೊಡು​ವಂತೆ​ ​ವಿನಂತಿಸಿದರು. ಅವರ ಬೇಡಿಕೆಯಂತೆ ಶೀಘ್ರವೇ ಅಂಗನವಾಡಿ ಕಟ್ಟಡದ ನಿರ್ಮಾಣದ ಕಾಮಗಾರಿಯನ್ನು ಕೆಗೆತ್ತಿಕೊಳ್ಳುವ ​ಭರವಸೆಯನ್ನು ಲಕ್ಷ್ಮಿ ಹೆಬ್ಬಾಳಕರ್ ನೀಡಿದರು.
​ ರಾಜಹಂಸಗಡ್​ದ​ ಕೆಲವು ಯುವಕರು ​ಶಾಸಕರನ್ನು ಭೇಟಿ‌ ಮಾಡಿ  ವಿವಿಧ ಜಿಮ್ ಮಷಿನ್ ಗಳ ಬೇಡಿಕೆಯನ್ನು ಇಟ್ಟಿದ್ದು, ​ಅದಕ್ಕೆ ಕೂಡ ಆದಷ್ಟು ಬೇಗ ವ್ಯವಸ್ಥೆ ಮಾಡುವ ಭರವಸೆಯನ್ನು ಲಕ್ಷ್ಮಿ ಹೆಬ್ಬಾಳಕರ್ ನೀಡಿದರು. 
 
​ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಕಂಡು ಖುಷಿಯಾಗುತ್ತದೆ. ಅತ್ಯಂತ ಆತ್ಮೀಯವಾಗಿ ಬಂದು ತಮ್ಮ ಬೇಡಿಕೆಗಳ ಕುರಿತು ಚರ್ಚಿಸುತ್ತಾರೆ.​ ನನ್ನ ಮೇಲೆ ಅತಿಯಾದ ಭರವಸೆಯನ್ನು ಇಟ್ಟಿದ್ದಾರೆ. ಈವರೆಗೆ ಕ್ಷೇತ್ರದಲ್ಲಿ ನನ್ನಿಂದ ಆಗಿರುವ ಕೆಲಸಗಳ ಕುರಿತು ಮನತುಂಬಿ ಸಂತಸ, ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿರುವುದು ನಮ್ಮ ಪುಣ್ಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಮೂಲಕ ಅವರ ಋಣವನ್ನು ತೀರಿಸುವ ಪ್ರಯತ್ನ ಮಾಡುತ್ತೇನೆ
– ಲಕ್ಷ್ಮಿ ಹೆಬ್ಬಾಳಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ 
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button