Latest

ಯಡಿಯೂರಪ್ಪನವರಿಗಾಗಿ ಹರಕೆ ಹೊತ್ತ ಶಾಸಕ; ಹರಕೆ ತೀರಿಸಲು ಸರ್ಕಾರದಿಂದ ಹಣ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಸಕರು ಹೊತ್ತ ಹರಕೆ ತೀರಿಸಲು ಸರ್ಕಾರದಿಂದ 25 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ರಾಜ್ಯ ಸರ್ಕಾರದ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೆ ಪಲ್ಗುಣಿ ಗ್ರಾಮದ ಕಾಲನಾಥೇಶ್ವರ ದೇವಾಲಯಕ್ಕೆ ಕಟ್ಟಿಗೆ ರಥ ಹಾಗೂ ಬೆಟಗೆರೆಯಲ್ಲಿರುವ ಭೈರವೇಶ್ವರ ದೇವಾಲಯ ಜೀರ್ಣೋದ್ಧಾರ ಮಾಡುವುದಾಗಿ ಹರಕೆ ಹೊತ್ತಿದ್ದರಂತೆ. ಇದಕ್ಕೆ 35 ಲಕ್ಷ ರೂಪಾಯಿ ನೆರವನ್ನು ನೀಡುವಂತೆ ಸಿಎಂ ಗೆ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಎಂ ಯದಿಯೂರಪ್ಪ ಕಂದಾಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗೆ ಸೂಚನೆ ನೀಡಿ, ಕಾಲನಾಥೇಶ್ವರ ದೇವಾಲಯಕ್ಕೆ 25 ಲಕ್ಷ ಹಣ ನೀಡಿದ್ದಾರೆ. ಈ ಕುರಿತು ಶಾಸಕ ಎಂ.ಪಿ.ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ಇದೀಗ ಶಾಸಕರ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ಜನಸಾಮಾನ್ಯಾರು ತಾವು ಹೊತ್ತ ಹರಕೆ ತೀರಿಸಲು ತಮ್ಮ ಸ್ವಂತ ಹಣವನ್ನು ಉಪಯೋಗಿಸುತ್ತಾರೆ. ಆದರೆ ಜನಪ್ರತಿನಿಧಿಯಾಗಿ, ಸರ್ಕಾರದ ಹಣದಲ್ಲಿ ತಾನು ಹೊತ್ತ ಹರಕೆ ತೀರಿಸುತ್ತಿರುವ ಶಾಸಕರ ಕ್ರಮಕ್ಕೆ ಖಂಡನೆ ವ್ಯಕ್ತವಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button