ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಕ್ಷದ ವಿಷಯ ಬಂದಾಗ ಬೆಳಗಾವಿ ಜಿಲ್ಲೆಯ ನಾಯಕರುಗಳು ನಾವೆಲ್ಲರೂ ಒಂದೇ, ನಮ್ಮ ಮಧ್ಯೆ ಯಾವುದೇ ತರಹದ ಭಿನ್ನಾಭಿಪ್ರಾಯವಿಲ್ಲ ಎಂದು ಶಾಸಕ ಮಹೇಶ ಕುಮಟಳ್ಳಿ ಹೇಳಿದರು.
ಹೊಸಟ್ಟಿ ಗ್ರಾಮದ ಅಗ್ರಾಣಿ ಹಳ್ಳ ಬಾಂದಾರ ನಿರ್ಮಾಣ ಭೂಮಿ ಪೂಜೆ ನೇರವೆರಿಸಿ ಮಾತನಾಡಿದ ಅವರು ಮನೆಯಂದ ಮೇಲೆ ಸಣ್ಣ ಪುಟ್ಟ ಏನೇ ವ್ಯತ್ಯಾಸಗಳಿದ್ದರು ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳು ಸಮರ್ಥರಿದ್ದಾರೆ ನಾವೇ ಎಲ್ಲ ನಾಯಕರು ಕುಳಿತು ಬಗೆಹರಿಸಿಕೊಳ್ಳುತ್ತೆವೆ. ಅದಕ್ಕಾಗಿ ಸುಮ್ಮನೇ ಯಾವುದೇ ಉಹಾ ಪೂಹಾಗಳಿಗೆ ಯಾರು ಮಹತ್ವ ನೀಡುವ ಅವಶ್ಯಕತೆ ಇಲ್ಲ. ಪಕ್ಷದ ಹಿತಾಸಕ್ತಿಗಾಗಿ ಎಲ್ಲರೂ ಯಾವ ತ್ಯಾಗಕ್ಕೂ ಸಿದ್ದರಿದ್ದೇವೆ. ಎಲ್ಲವೂ ಸರಿ ಹೊಗಲಿದೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲಾ ಯಾರೂ ಎಲ್ಲಿಯೂ ಸೇರಿ ಕುಳಿತು ಮಾತನಾಡಿದರೆ ಪಕ್ಷದ ಸಂಘಟನೆಯ ಕುರಿತು ಚರ್ಚಿಸಿದರೆ ಅದಕ್ಕೆ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲಾ ಈ ಹಿಂದೆ ಬೆಳಗಾವಿಯಲ್ಲಿ ನಾಯಕರುಗಳು ಸೇರಿದ್ದ ಸಮಯದಲ್ಲಿ ನಾನು ಬೆಂಗಳೂರಿನಲ್ಲಿ ಇದ್ದೆ ಎಂದು ಹೇಳಿದರು.
ಅಥಣಿ ಹೆಸ್ಕಾಂನಲ್ಲಿನ ಭ್ರಷ್ಟಾಚಾರ ಆರೋಪದಡಿ 20 ಜನ ಸಿಬ್ಬಂದಿಯ ಅಮಾನತು ಆಗಿರುವ ಬಗ್ಗೆ ಕೇಳಲಾದ ಪ್ರೇಶ್ನೆಗೆ ಉತ್ತರಿಸಿದ ಅವರು ಕಾನೂನಿಗಿಂತ ಯಾರು ದೊಡ್ಡವರಲ್ಲ ಈ ಕುರಿತು ಹಲವು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದಾಗಲೂ ಎಚ್ಚೆತ್ತು ಕೊಳ್ಳದೆ ತಪ್ಪು ಎಸಗಿದ್ದರಿಂದಲೇ ತನಿಖೆ ನಡೆಸಿ ಕ್ರಮ ಜರಿಗಿಸುವುದು ಅನಿವಾರ್ಯವಾಗಿತ್ತು.
ಈ ಕುರಿತು ಸರಕಾರದ ನಿಲುವು ಸ್ಪಷ್ಟ ಇದೆ ಯಾವುದೇ ಸರಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದರೆ ಅಂತಹವರಿಗೂ ಶಿಕ್ಷೆ ಖಂಡಿತ ಕಾದಿದೆ ಎಚ್ಚರಿಕೆಯಿಂದ ಜನರ ಕೆಲಸ ದೇವರ ಕೆಲಸವೆಂದು ಮಾಡಿಕೊಡಬೇಕು ಎಂದು ಪರೋಕ್ಷವಾಗಿ ಅಧಿಕಾರಗಳಿಗೆ ಎಚ್ಚರಿಕೆ ನೀಡಿದರು.
ಈ ವೇಳೆ ವೀರಣ್ಣ ವಾಲಿ, ಶ್ರೀಶೈಲ ನಾಯಕ,ಕುಮಾರ ಗೊಟ್ಟಿ,ಎಮ್ ಮಕಾನದಾರ,ನರಸು ಬಡಕಂಬಿ, ಶಿವು ನಾಯಕ,ಮಹಾದೇವ ಹಲ್ಯಾಳ,ಶ್ರೀಶೈಲ ಮರಡಿ,ಅರ್ಜುನ ನಾಯಕ,ಅರುಣ ಭಾಸಿಂಗಿ ಸೇರಿದಂತೆ ಹಲವರು ಇದ್ದರು.
ಡಾ.ಸೌಂದರ್ಯ ಆತ್ಮಹತ್ಯೆ; ಮರಣೋತ್ತರ ಪರೀಕ್ಷಾ ವರದಿ ಹೇಳುವುದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ