Latest

ಕ್ಯಾನ್ಸರ್ ಗೆ ಶಾಸಕ ಪಿ.ಟಿ.ಥಾಮಸ್ ಬಲಿ

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ತೃಕ್ಕಾಕ್ಕರ ಕ್ಷೇತ್ರದ ಕೇರಳ ಶಾಸಕ ಪಿ.ಟಿ.ಥಾಮಸ್ ಕ್ಯಾನ್ಸರ್ ನಿಂದ ವಿಧಿವಶರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ವೆಲ್ಲೂರು ಮೆಡಿಕಲ್ ಕಾಲೇಜಿನಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಥಾಮಸ್, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಎರಡು ಬಾರಿ ತೊಡುಪುಳ ಕ್ಷೇತ್ರ ಪ್ರತಿನಿಧಿಸಿದ್ದ ಥಾಮಸ್, ಇಡುಕ್ಕಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದ ಮಾಜಿ ಸಂಸದರೂ ಆಗಿದ್ದರು.

ಜನಪ್ರಿಯ ಶಾಸಕರಾಗಿದ್ದ ಪಿ.ಟಿ.ಥಾಮಸ್, ಪರಿಸರ ಸಂರಕ್ಷಣೆಯ ಪರವಾದ ನಿಲುವು ಹೊಂದಿದ್ದವರು. ಕಾಂಗ್ರೆಸ್ ನ ವಿಚಾರಧಾರೆಗಳನ್ನು ಆಅಳವಾಗಿ ಹೊಂದಿದವರಾಗಿದ್ದು, ಶಾಸಕ ಥಾಮಸ್ ನಿಧನಕ್ಕೆ ರಾಹುಲ್ ಗಾಂಧಿ, ಕೇರಳ ರಾಜ್ಯಪಾಲ ಆರಿಫ್ ಮುಹ್ಮದ್ ಖಾನ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

ಸಿಎಂ ಕಾರಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು

Home add -Advt

Related Articles

Back to top button