*600 ಫಲಾನುಭವಿಗಳಿಗೆ ಶೀಘ್ರದಲ್ಲಿ ಸೂರು ವ್ಯವಸ್ಥೆ ಶಾಸಕಿ ಶಶಿಕಲಾ ಜೊಲ್ಲೆ ಭರವಸೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಪ್ಪಾಣಿ ನಗರದಲ್ಲಿ ಪ್ರಧಾನ ಮಂತ್ರಿಆವಾಸ ಯೋಜನೆಯಡಿ 133 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಮಾದರಿಯ 2052 ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು,ಬುಧವಾರ ನಿಪ್ಪಾಣಿ ಶಾಸಕಿ ಶಶಿಕಲಾ ಜಿಲ್ಲೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ,ಪ್ರಗತಿ ಕಾರ್ಯವನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದರು.
ಬಳಿಕ ಶಶಿಕಲಾ ಜೊಲ್ಲೆ ಮಾತನಾಡಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಈಗ ಮತ್ತೆ 21 ಕೋಟಿ ಮುಂಜೂರಾಗಿದ್ದು 600 ಮನೆಗಳು ಸಿದ್ಧವಾಗಿದ್ದು, ಅಂತಿಮ ಹಂತದಲ್ಲಿದ್ದು,ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು (ನೀರು,ರಸ್ತೆ, ಚರಂಡಿ,ವಿದ್ಯುತ್)ಮುಂತಾದ ಕಾಮಗಾರಿಗಳನ್ನು 2 ತಿಂಗಳಲ್ಲಿ ದಸರಾ ವರೆಗೆ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು.6 ಲಕ್ಷ ಲೀಟರ್ ನೀರಿನ ಟ್ಯಾಂಕ್ ಸಿದ್ಧಪಡಿಸಿ ಪೈಪ್ ಲೈನ್ ಅಳವಡಿಸಲಾಗುವುದು. ಉತ್ತಮ ಗುಣಮಟ್ಟದೊಂದಿಗೆ ಶೀಘ್ರದಲ್ಲಿ ಪೂರ್ಣಗೊಳಿಸುಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಟ್ಟ ಮಾತಿನಂತೆ ಆದಷ್ಟು ಬೇಗನೆ ಮನೆಗಳನ್ನು ನಿರ್ಮಿಸಿ, ಫಲಾನುಭವಿಗಳಿಗೆ ಸುರು ವ್ಯವಸ್ಥೆ ಒದಗಿಸಲಾಗುವುದು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ, ವಿನಯ, ಪೌರಾಯುಕ್ತರಾದ ದೀಪಕ ಹರದಿ ನಗರಸಭೆ ಸದಸ್ಯರಾದ ರಾಜು ಗುಂದೇಶಾ,ಸಂತೋಷ ಸಾಂಗವಕರ,ಸುಜಾತಾ ಕದಮ, ಆಶಾ ಟವಳೇ, ದತ್ತಾ ನೇತ್ರೆ, ರವಿ ಕದಮ, ಪ್ರಣವ ಮಾನವಿ, ಮಹೇಶ ಸೂರ್ಯವಂಶಿ, ಸುರಜ ಖವರೆ,ಪ್ರಶಾಂತ ಕೆಸ್ತೆ, ಪ್ರಸಾದ ಅವಾಂದಕರ,ಸ್ಥಳೀಯ ಮುಖಂಡರು, ಫಲಾನುಭವಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ