Kannada NewsLatest

ಖಿಳೇಗಾವ ಗ್ರಾಮದಲ್ಲಿ ಮಂಗಲ ಕಾರ್ಯಲಯ ಭೂಮಿಪೂಜೆ

ಪ್ರಗತಿವಾಹಿನಿ ಸುದ್ದಿ; ಕಾಗವಾಡ: ಬಸವಜಯಂತಿಯ ನಿಮಿತ್ಯ ಸುಕ್ಷೇತ್ರ ಖಿಳೇಗಾವ ಗ್ರಾಮಕ್ಕೆ ಕಾಗವಾಡ ಶಾಸಕ, ಮಾಜಿ ಸಚಿವ ಶ್ರೀಮಂತ (ತಾತ್ಯಾ) ಪಾಟೀಲ ಅವರು ಭೇಟಿ ನೀಡಿ ಬಸವೇಶ್ವರ ದೇವರ ದರ್ಶನವನ್ನು ಪಡೆದು, ಸಮಸ್ತ ನಾಡಿನ ಜನತೆಗೆ ಬಸವಜಯಂತಿಯ ಹಾರ್ದಿಕ ಶುಭಾಶಯಗಳನ್ನು ಕೋರಿದರು.

ಇದೇ ಸಮಯದಲ್ಲಿ ಖಿಳೇಗಾವ ಬಸವೇಶ್ವರ ದೇವಸ್ಥಾನದ ಆವರಣ ದಲ್ಲಿ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯಿಂದ ಮಂಜೂರಾದ ಅನುದಾನ ಹಾಗೂ ಭಕ್ತರಿಂದ ದೇಣಿಗೆ ಮೂಲಕ ನಿರ್ಮಿಸಲು ಉದ್ದೇಶಿಸಿರುವ ಮಂಗಲ ಕಾರ್ಯಲಯದ ಭೂಮಿಪೂಜೆಯನ್ನು ಮಾಡಿದರು. ಸ್ಥಳೀಯ ಮುಖಂಡರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ದೇವಸ್ಥಾನದ ಕಮಿಟಿಯ ಅಧ್ಯಕ್ಷರು, ಸದಸ್ಯರೊಂದಿಗೆ ಭೂಮಿಪೂಜೆ ನೆರವೇರಿಸಿ ಸಲ್ಲಿಸಿ ಚಾಲನೆ ನೀಡಿದರು.

ಬಸವಜಯಂತಿಯ ನಿಮಿತ್ತ ಖಿಳೇಗಾವ ಗ್ರಾಮದ ಬಸವ ಯುವಕ ಮಂಡಳದ ಯುವಕರಿಗೆ ಶಾಸಕರು ಅವರ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಟಿ ಶರ್ಟ್ ವಿತರಿಸಿದರು.

ನಂತರ ದೇವಸ್ಥಾನದ ಕಮಿಟಿಯವರು ಪ್ರೀತಿಯಿಂದ ಮಾಡಿದ ಸನ್ಮಾನವನ್ನು ಸ್ವೀಕರಿಸಿದರು. ಈ ಸಮಯದಲ್ಲಿ ಖಿಳೇಗಾವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ನಾಗ್ಗೋಳ, ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಧರೆಪ್ಪ ಹೊನ್ನಾಗೋಳ ( ಪೂಜಾರಿ ), ದೇವಸ್ಥಾನದ ಕಮಿಟಿಯ ಕಾರ್ಯಾಧ್ಯಕ್ಷರಾದ ಶಿವಪ್ಪಾ ಅಕ್ಕಿಮರಡಿ, ಸ್ಥಳೀಯ ಮುಖಂಡರಾದ ರೇವಣ್ಣಾ ಪಾಟೀಲ, ಮಹಾದೇವ ಕೋರೆ, ದಿಲೀಪ ಪವಾರ, ವಿಜಯ ಅಳ್ಳಟ್ಟಿ, ಸುನಿಲ ಹೊನ್ನಾಗೋಳ, ವಿಜಯ ನಾಗ್ಗೋಳ, ಗಣೇಶ ನಾಗ್ಗೋಳ, ಸಚಿನ ಪೂಜಾರಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ದೇವಸ್ಥಾನದ ಕಮಿಟಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button