Kannada NewsKarnataka NewsPolitics

*ಶಾಸಕರು ವಿದೇಶ ಪ್ರವಾಸಕ್ಕೆ ಹೋದರೆ ಬೇಡ ಎನ್ನಲು ಆಗುತ್ತಾ? ಪ್ರಿಯಾಂಕ್ ಖರ್ಗೆ*

ಪ್ರಗತಿವಾಹಿನಿ ಸುದ್ದಿ: ಶಾಸಕರು ಖಾಸಗಿಯಾಗಿ ವಿದೇಶ ಪ್ರವಾಸಕ್ಕೆ ಹೋದರೆ ಬೇಡ ಎನ್ನಲು ಆಗುತ್ತಾ? ಎಂದು ಶಾಸಕರ ವಿದೇಶ ಪ್ರವಾಸವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಖಾಸಗಿಯಾಗಿ ಟೂರ್ ಮಾಡೋದು ತಪ್ಪಾ? ನಾವು ಎಲ್ಲೂ ಹೋಗಬಾರದಾ? ನಮ್ಮ ಪಕ್ಷದ ವಿಚಾರ ಬಂದಾಗ ನಾವೆಲ್ಲ ಒಂದೇ. ಕಳೆದ ವರ್ಷ ಕೆಲವರು ಹೋಗಿದ್ರು. ಅವತ್ತಿಲ್ಲದ ವಿಚಾರ ಈಗ್ಯಾಕೆ? ಹೋಗೋರನ್ನು ತಡೆಯಲು ಸಾಧ್ಯವೇ? ಅಂತ ಶಾಸಕರ ಟೂರ್ ವಿಚಾರ ಸಮರ್ಥನೆ ಮಾಡಿಕೊಂಡರು.

Home add -Advt

ಖಾಸಗಿಯಾಗಿ ಟೂರ್ ಮಾಡೋದು ತಪ್ಪಾ? ನಾವು ಎಲ್ಲೂ ಹೋಗಬಾರದಾ? ನಮ್ಮ ಪಕ್ಷದ ವಿಚಾರ ಬಂದಾಗ ನಾವೆಲ್ಲ ಒಂದೇ. ಕಳೆದ ವರ್ಷ ಕೆಲವರು ಹೋಗಿದ್ರು. ಅವತ್ತಿಲ್ಲದ ವಿಚಾರ ಈಗ್ಯಾಕೆ? ಹೋಗೋರನ್ನು ತಡೆಯಲು ಸಾಧ್ಯವೇ? ಅಂತ ಶಾಸಕರ ಟೂರ್ ವಿಚಾರ ಸಮರ್ಥನೆ ಮಾಡಿಕೊಂಡರು.

ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಗೊಂದಲದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರ ಒಳ ಜಗಳದ ವಿಚಾರ ಮುಚ್ಚಿಡಲು ನಮ್ಮ ಮೇಲೆ ಬೆರಳು ತೋರಿಸುತ್ತಿದ್ದಾರೆ. ನಮ್ಮಲ್ಲಿ ಗೊಂದಲ ಇಲ್ಲ. ಹೈಕಮಾಂಡ್ ಕೂಡ ಸ್ಪಷ್ಟವಾಗಿ ಹೇಳಿದೆ. ಖರ್ಗೆಯವರೂ ಈ ವಿಚಾರವಾಗಿ ಸ್ಪಷ್ಟನೆ ಮಾಡಿದ್ದಾರೆ‌. ಇನ್ನು ಗೊಂದಲ ಎಲ್ಲಿದೆ? ನಮ್ಮಲ್ಲಿ ಯಾವುದೇ ಗೊಂದಲ ‌ಇಲ್ಲ ಅಂತ ತಿಳಿಸಿದರು.

Related Articles

Back to top button