Latest

ಪೊಲೀಸ್ ಕಮಿಶನರ್ ಭೇಟಿಯಾದ ಶಾಸಕದ್ವಯರು

ಶಿವ ಕಾರ್ಯಕರ್ತರಿಗೆ ಕಿರುಕುಳ ನೀಡದಂತೆ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಶಾಸಕರಿಬ್ಬರು ಬುಧವಾರ ಮಹಾನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಸಂಜೆ ನಡೆಯಲಿರುವ ಶಿವಜಯಂತಿ ಮೆರವಣಿಗೆ ಸಂಬಂಧ ಚರ್ಚಿಸಿದರು. 

ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಪೊಲೀಸ್ ಆಯುಕ್ತ ಲೋಕೇಶಕುಮಾರ ಹಾಗೂ ಉಪಆಯುಕ್ತರಾದ ಸೀಮಾ ಲಾಟ್ಕರ್, ಯಶೋಧಾ ವಂಟಗೂಡೆ ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಮೆರವಣಿಗೆ ನಡೆಯುವ ವೇಳೆ ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಪೊಲೀಸರಿಂದ ಅನಗತ್ಯ ಕಿರುಕುಳವಾಗಬಾರದು. ಕಾರ್ಯಕರ್ತರು ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ಪೊಲೀಸರಿಂದಲೂ ಅನಗತ್ಯವಾಗಿ ಕಾರ್ಯಕರ್ತರನ್ನು ಕೆರಳಿಸುವಂತಹ ಕೆಲಸವಾಗಬಾರದು ಎಂದು ಸೂಚಿಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button