ಪ್ರಗತಿವಾಹಿನಿ ಸುದ್ದಿ: ಸಚಿವರ ಸಭೆಯಲ್ಲಿಯೇ ವಿಧಾನ ಪರಿಷತ್ ನೂತನ ಸದಸ್ಯರೊಬ್ಬರು ಆರಾಮಾಗಿ ನಿದ್ದೆಗೆ ಜಾರಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಕುಡಿಯುವ ನೀರಿನ ಸಮಸ್ಯೆ, ಕೃಷಿ ಚಟುವಟಿಕೆಗಳಿಗೆ ಬೀಜ ಹಾಗೂ ರಸಗೊಬ್ಬರ ಪೂರೈಕೆ, ಮಳೆ, ಅತಿವೃಷ್ಟಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಯಿತು. ಸಭೆಯ ಮುಂದಿನ ಸಾಲಿನಲ್ಲಿ ಕುಳಿತಿದ್ದ ಪರಿಷತ್ ನೂತನ ಸದಸ್ಯ ಎ.ವಸಂತಕುಮಾರ್ ಕುರ್ಚಿ ಮೇಲೆಯೇ ನಿದ್ದೆಗೆ ಜಾರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಗಂಭೀರವಾಗಿ ಚರ್ಚೆ ನಡೆಸುತ್ತಿದ್ದರೆ ಎಂಎಲ್ ಸಿ ವಸಂತಕುಮಾರ್ ಮಾತ್ರ ಯಾವುದನ್ನೂ ಆಲಿಸದೇ ಸಚಿವರ ಎದುರೇ ಸಭೆಯಲ್ಲಿ ನಿದ್ದೆ ಮಾಡುತ್ತಾ ಗೊರಕೆ ಹೊಡೆದಿದ್ದಾರೆ. ಮಾದ್ಯಮಗಳ ಕ್ಯಾಮರಾ ನಿದ್ದೆಗೆ ಜಾರಿದ ಜನಪ್ರತಿನಿಧಿಯನ್ನು ಚಿತ್ರೀಕರಿಸುತ್ತಿದ್ದಂತೆ ಎಂಎಲ್ ಸಿಯ ಪಕ್ಕದಲ್ಲಿ ಕುಳಿತಿದ್ದವರು, ಕಾಲಿಗೆ ತಟ್ಟಿ ಎಚ್ಚರಗೊಳಿಸಿದ್ದಾರೆ. ಜನರ ಸಮಸ್ಯೆ, ಕುಂದು ಕೊರತೆ ಬಗ್ಗೆ ಸಚಿವರ ಬಳಿ ಚರ್ಚಿಸಿ ಪರಿಹರಿಸಬೇಕಿದ್ದ ನೂತನ ಎಂಎಲ್ ಸಿಯೇ ಚಿಂತೆ ಇಲ್ಲದೇ ಸಭೆಯಲ್ಲೇ ನಿದ್ದೆಗೆ ಜಾರಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ