*ಅಲರ್ಟ್ ಮೆಸೇಜ್ ಗೆ ಕಂಗಾಲಾದ ಸಚಿವರು, ಶಾಸಕರು; ಬಿಜೆಪಿಯವರೂ ಅಲರ್ಟ್ ಆಗಲಿ ಎಂದ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೈಸರ್ಗಿಕ ವಿಕೋಪ ಪ್ರಾಧಿಕಾರ ನಡೆಸಿದ ಎಮರ್ಜನ್ಸಿ ಅಲರ್ಟ್ ಸಂದೇಶಕ್ಕೆ ಸಚಿವರು, ಶಾಸಕರೇ ಕೆಲಹೊತ್ತು ಕಂಗಾಲಾದ ಘಟನೆ ನಡೆದಿದೆ.
ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ನಾಯಕರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ವೇಳೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡುತ್ತಿದ್ದ ವೇಳೆ ಹಲವರ ಮೊಬೈಲ್ ಗೆ ಬೀಪ್ ಸೌಂಡ್ ನೊಂದಿಗೆ ಎಮರ್ಜನ್ಸಿ ಅಲರ್ಟ್ ಮೆಸೇಜ್ ಬಂದಿದೆ. ವೇದಿಕೆ ಮೇಲೆ ಕುಳಿತಿದ್ದ ಕಾಂಗ್ರೆಸ್ ನಾಯಕರು ಏನಿದು? ಎಂದು ತಬ್ಬಿಬ್ಬಾಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಆತಂಕದಿಂದ ಕ್ಷಣ ಮಾತ್ರ ಅತ್ತಿತ್ತ ನೋಡಿದ್ದಾರೆ.
ಮಾಧ್ಯಮದವರು ಇದು ಪ್ರಕೃತಿ ವಿಕೋಪ ಮಾಹಿತಿ ಅಲರ್ಟ್ ಬಗ್ಗೆ ಟ್ರಯಲ್ ಸಂದೇಶ. ಇದು ಭಾರತೀಯ ದೂರ ಸಂಪರ್ಕ ಇಲಾಖೆಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಡೆಸಿದ ಟ್ರಯಲ್ ಆಗಿದ್ದು, ತುರ್ತು ಸಂದರ್ಭದಗಳಲ್ಲಿ ಎಚ್ಚರಿಕೆ ವ್ಯವಸ್ಥೆ ಅಗತ್ಯತೆಯ ಬಗ್ಗೆ ನಡೆಸಿದ ಮಾದರಿ ಪರೀಕ್ಷೆ. ಈ ಬಗ್ಗೆ ಮೊದಲೇ ಮಾಹಿತಿಯನ್ನು ನೀಡಲಾಗಿತ್ತು. ಈಗ ಟ್ರಯಲ್ ಟೆಸ್ಟ್ ಮಾಡಿದ್ದಾಗಿ ಹೇಳಿದ್ದಾರೆ. ಬಳಿಕ ಕಾಂಗ್ರೆಸ್ ನಾಯಕರು ನಿಟ್ಟುಸಿರುಬಿಟ್ಟಿದ್ದಾರೆ.
ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಈ ತುರ್ತು ಸಂದೇಶದಿಂದ ನಾವು ನೀವೆಲ್ಲ ಎಚ್ಚರಗೊಂಡೆವು. ಹಾಗೇ ಬಿಜೆಪಿ ನಾಯಕರು ಸ್ವಲ್ಪ ಅಲರ್ಟ್ ಆಗಲಿ. ಬಿಜೆಪಿಯ ಮುಖಂಡರು, ಮಾಜಿ ಶಾಸಕರು ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ