
ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೊಬೈಲ್ ಬಳಸುವ ವಿಚಾರವಾಗಿ ತಂದೆ-ಮಗನ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮೊಬೈಲ್ ಗೆ ಅಡಿಕ್ಟ್ ಆಗಿದ್ದ ಮಗನ ಅಭ್ಯಾಸ ಕಂಡು ಕೋಪಗೊಂಡ ತಂದೆ ಮಗನನ್ನೇ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ತಡ ರಾತ್ರಿ ಎಷ್ಟು ಹೊತ್ತಾದರೂ ಮೊಬೈಲ್ ನೋಡುವುದನ್ನು ನಿಲ್ಲಿಸದ ಮಗನ ಮೇಲೆ ಕೋಪಗೊಂಡ ತಂದೆ ಚಾಕುವಿನಿಂದ ಮಗನಿಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಸ್ಲಂಪಾಷಾ ಮಗನನ್ನೇ ಕೊಂದ ತಂದೆ. ಉಮೇಜ್ ಮೃತ ಮಗ. ಮೈಸೂರಿನ ಎನ್.ಆರ್.ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಸ್ಲಾಂಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ