
ಪ್ರಗತಿವಾಹಿನಿ ಸುದ್ದಿ: ಪತಿ ಕೋತಿ ಎಂದು ತಮಾಷೆ ಮಾಡಿದಕ್ಕೆ ಮನನೊಂದ ಮಾಡೆಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತಳನ್ನು ತನು ಸಿಂಗ್ (28) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಲಕ್ನೋದ ಸಹದತ್‌ಗಂಜ್ ಲಕಡ್ ಮಂಡಿ ಪ್ರದೇಶದ ನಿವಾಸಿಯಾಗಿದ್ದ ಮಾಡೆಲ್ ಆಟೋ ಚಾಲಕ ರಾಹುಲ್ ಶ್ರೀವಾಸ್ತವ ಎಂಬುವವರ ಜೊತೆ ವಿವಾಹ ಆಗಿದ್ದರು.
ಕುಟುಬಂಸ್ಥರ ಮುಂದೆ ತಮಾಷೆ ಮಾಡುವ ವೇಳೆ ಪತಿ ರಾಹುಲ್ ತನುರನ್ನು “ಕೋತಿ” ಎಂದು ಕರೆದಿದ್ದಾರೆ. ಮಾಡೆಲಿಂಗ್ ವಿದ್ಯಾರ್ಥಿನಿಯಾಗಿದ್ದ ತನು, ತುಂಬಾ ಸೂಕ್ಷ್ಮ ಸ್ವಭಾವದವರಾಗಿದ್ದರು. ಪತಿ ಕೋತಿ ಎಂದು ಕರೆಯುತ್ತಿದ್ದಂತೆಯೇ ತನು ತೀರಾ ಮನಸ್ಸಿಗೆ ಹಚ್ಚಿಕೊಂಡು ಬೇಸರದಿಂದಲೇ ಮತ್ತೊಂದು ಕೋಣೆಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೂಡಲೇ ಕುಟುಂಬ ಸದಸ್ಯರು ಬಾಗಿಲು ಒಡೆದು ತನುಳನ್ನು ಕರೆತಂದು, ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟೊತ್ತಿಗೆ ತುಂಬಾ ತಡವಾಗಿತ್ತು. ಪರೀಕ್ಷೆಯ ನಂತರ ವೈದ್ಯರು ಆಕೆ ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ.
ಮಾಹಿತಿಯ ಮೇರೆಗೆ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಮೃತ ದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

