Latest

ಫೆ.10ಕ್ಕೆ ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ

   ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ ತಿಂಗಳಲ್ಲಿ 2 ದಿನ ಕರ್ನಾಟಕಕ್ಕೆ ಬರಲು ಒಪ್ಪಿದ್ದು, ಇಲ್ಲಿಂದಲೇ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. 

ಬೆಂಗಳೂರಿನಲ್ಲಿ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ  ಪಕ್ಷದ ಪ್ರಮುಖರ ಸಭೆ ನಡೆಸಿ ಈ ವಿಷಯ ತಿಳಿಸಿದ್ದಾರೆ. ಫೆ.10 ಮತ್ತು 19ರಂದು ರಾಜ್ಯದಲ್ಲಿ ಕಾರ್ಯಕ್ರಮ ನಡೆಯಲು ಮೋದಿ ಸಮ್ಮತಿಸಿದ್ದಾರೆ. 10ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. 19ರಂದು ಎಲ್ಲ ಕಾರ್ಯಕ್ರಮ ಮಾಡಬೇಕೆನ್ನುವುದನ್ನು ನಿರ್ಧರಿಸಿಲ್ಲ ಎಂದು ಅವರು ತಿಳಿಸಿದರು. 

Home add -Advt

ರಾಜ್ಯದ 22  ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲಾಗುವುದು.  ಫೆಬ್ರವರಿ 28ರಂದು “ಮೇರಾ ಬೂತ್ -ಸಬ್ ಸೆ ಮಜುಬೂತ್” ಕಾರ್ಯಕ್ರಮ. ಫೆಬ್ರವರಿ 26 ರಂದು ಪ್ರತಿಯೊಬ್ಬರ ಮನೆಯಲ್ಲಿ “ಕಮಲ ಜ್ಯೋತಿ” ಬೆಳಗಿಸುವ ಕಾರ್ಯಕ್ರಮ ಹಾಗೂ ಮಾರ್ಚ್ 2 ರಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ “ಕಮಲ ಸಂಕಲ್ಪ” ರ‍್ಯಾಲಿ ನಡೆಸಲಾಗುವುದು ಎಂದು ಅವರು ಹೇಳಿದರು. 

 ಫೆಬ್ರವರಿ 14 ಹಾಗೂ 21 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹ ರಾಜ್ಯಕ್ಕೆ ಬರಲು ಒಪ್ಪಿದ್ದಾರೆ  ಎಂದು ಯಡಿಯೂರಪ್ಪ ತಿಳಿಸಿದರು.

Related Articles

Back to top button