ಮೊಹಮ್ಮದ್ ನೆಲಪಾಡ್ ವಿರುದ್ಧ ಮತ್ತೊಂದು ಆರೋಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನೆಲಪಾಡ್ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ. ಕಾಂಗ್ರೆಸ್​ ಕಾರ್ಯಕರ್ತರ ಮೇಲೆಯೇ ಮೊಹಮ್ಮದ್​​ ನಲಪಾಡ್​​ ಮತ್ತವರ ಗುಂಪು​​ ಹಲ್ಲೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಯೂತ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನೆಲಪಾಡ್ ಹಾಗೂ ಸಚಿನ್ ಗೌಡ ಎಂಬುವಾವರ ಮಧ್ಯೆ ಗಲಾಟೆ ನಡೆದಿದ್ದು, ನೆಲಪಾಅಡ್, ಸಚಿನ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಾಂಬಂಧ ಸಚಿನ್ ಗೌಡ ಪೊಲಿಸ್ ಠಾಣೆಯಲ್ಲಿ ದೂರು ನೀದಾಲು ಮುಂದಾಗಿದ್ದಾರೆ.

ಆದರೆ ಇದಕ್ಕೂ ಮುನ್ನ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ನೆಲಪಾಡ್ ಗಲಾಟೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ನಲಪಾಡ್​​, ನಿನ್ನೆ ಯುವ ಕಾಂಗ್ರೆಸ್​​ನಿಂದ ಯಂಗ್​​ ಇಂಡಿಯಾ ಕೀ ಬೋಲೋ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. 5 ಜನರಿಗೆ ಬಹುಮಾನ ಕೊಡಲಾಯ್ತು. ಸಚಿನ್​​ ಗೌಡ ಎಂಬಾತನು ಸೋತಿದ್ದ. ಇದರಿಂದ ಅವನಿಗೂ ಬೇಸರ ಆಗಿತ್ತು. ಸಚಿನ್​​ ​ ನನ್ನ ಯಾಕೆ ಸ್ಟೇಜ್​ ಮೇಲೆ ಕರಿಯಲಿಲ್ಲ ಎಂದು ಗಲಾಟೆ ಆರಂಭಿಸಿದ್ದ. ಅಲ್ಲಿ ಹಲವರು ಇದ್ದರು. ನಾನು ಗಲಾಟೆ ಮಧ್ಯೆ ಹೋಗಿ ರಾಜಿ ಮಾಡಲು ಮುಂದಾದಾಗ ಸಚಿನ್ ನನಗೆ ಆವಾಜ್ ಹಾಕಿದ್ದ. ಮಾಧ್ಯಮದಲ್ಲಿ ನಿನ್ನ ಮಾನ ಹರಾಜು ಹಾಕ್ತೀನಿ ಎಂದು ಬೆದರಿಕೆ ಹಾಕಿದ್ದ. ಆ ಸಂದರ್ಭದಲ್ಲಿ ತಳ್ಳಾಟ ನೂಕಾಟ ಆಗಿದೆ. ಹೀಗಾಗಿ ಘಟನೆ ಬಗ್ಗೆ ಹಾಗೂ ನನಗೆ ಬೆದರಿಕೆ ಹಾಕಿದ್ದಕ್ಕೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button