ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ – ಪ್ರತಿಷ್ಠಿತ ಸುಕೋ ಬ್ಯಾಂಕ್‍ನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಮುಂದಿನ ಐದು ವರ್ಷಕ್ಕೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಸಹಕಾರ ಸಂಘಗಳ ಹಿರಿಯ ನಿರೀಕ್ಷಕ, ಚುನಾವಣಾಧಿಕಾರಿ ಕೆ.ಎನ್. ಬಸವರಾಜ್ ಅವರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಶನಿವಾರ ಘೋಷಣೆ ಮಾಡಿ, ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು.
ಹಾಲಿ ಉಪಾಧ್ಯಕ್ಷರಾದ ಸಿಂಧನೂರಿನ ಪಿ. ಮುರಳೀಧರ ರೆಡ್ಡಿ ಅವರೂ ಕೂಡ ಉಪಾಧ್ಯಕ್ಷರಾಗಿ, ಸುಕೋ ಬ್ಯಾಂಕ್‍ನ ಸಂಸ್ಥಾಪಕ ಅಧ್ಯಕ್ಷ ಮನೋಹರ್ ಮಸ್ಕಿ, ರಾಯಚೂರಿನ ನಾಗನಗೌಡ, ಗಂಗಾವತಿಯ ಜಗದೀಶಪ್ಪ ಸಿಂಗನಾಳ್, ಬಳ್ಳಾರಿಯ ಸಾವಿತ್ರಿ ದಾನಗೌಡ್ರು, ಸಿಂಧನೂರಿನ ಅರ್ಷಿಯಾ, ಸಿಂಧನೂರಿನ ಮಹೇಂದ್ರ ಚೌಧರಿ ಮತ್ತು ಕೊಪ್ಪಳದ ಪದಮ್‍ಚಂದ್ ಮೆಹ್ತಾ ಅವರು ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುಕೋ ಬ್ಯಾಂಕ್‍ನ ಬೋರ್ಡ್ ಆಫ್ ಮ್ಯಾನೇಜ್‍ಮೆಂಟ್‍ನ ಅಧ್ಯಕ್ಷರಾಗಿ ಕೊಪ್ಪಳದ ವೆಂಕಾರೆಡ್ಡಿ ಅವರು ಆಯ್ಕೆಯಾಗಿದ್ದಾರೆ.
ಪುನರಾಯ್ಕೆ ಆದ ಮೋಹಿತ್ ಮಸ್ಕಿ ಅವರು ಮಾತನಾಡಿ, `ಬ್ಯಾಂಕ್ ಅನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ಕ್ರಿಯಾಶೀಲ ಯೋಜನೆಗಳನ್ನು ಜಾರಿ ಮಾಡಲು ಎಲ್ಲ ಸದಸ್ಯರ ಸಹಕಾರ ಅಗತ್ಯ’ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ