ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯೊಬ್ಬನಿಗೆ ಮಹಿಳೆಯರ ಬಟ್ಟೆ ಒಗೆಯುವ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದ ಬಿಹಾರದ ಜಂಜರ್ ಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ಪಾಟ್ನಾ ಹೈಕೋರ್ಟ್ ಕರ್ತವ್ಯದಿಂದ ತಾತ್ಕಾಲಿಕ ವಜಾಗೊಳಿಸಿ ಆದೇಶ ನೀಡಿದೆ.
ಅತ್ಯಾಚಾರಕ್ಕೆ ಯತ್ನ ನಡೆಸಿದ್ದ ಆರೋಪಿಗೆ 6 ತಿಂಗಳ ಕಾಲ ಗ್ರಾಮದ ಮಹಿಳೆಯರ ಬಟ್ಟೆ ತೊಳೆದು ಇಸ್ತ್ರಿ ಮಾಡಿಕೊಡಬೇಕು. ಆಗ ಮಾತ್ರ ಜಾಮೀನಿನ ಮೇಲೆ ಬಿಡುಗಡೆ ಸಾಧ್ಯ ಎಂದು ಜಂಜರ್ ಪುರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಅವಿನಾಶ್ ಕುಮಾರ್ ತೀರ್ಪು ನೀಡಿದ್ದರು. ಅಲ್ಲದೇ ಗ್ರಾಮದ ಮುಖ್ಯಸ್ಥರಿಗೆ ಇದರ ಮೇಲ್ನೋಟದ ಹೊಣೆ ವಹಿಸಿದ್ದರು. ವಿವಾದಾತ್ಮಕ ತೀರ್ಪಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಪಾಟ್ನಾ ಹೈಕೋರ್ಟ್, ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಅವಿನಾಶ್ ಕುಮಾರ್ ಅವರನ್ನು ಮುಂದಿನ ಆದೇಶದವರೆಗೆ ಕರ್ತವ್ಯದಿಂದಲೇ ಮುಕ್ತಿಗೊಳಿಸಿ ಆದೇಶ ನೀಡಿದೆ.
ಸೊಂಟಕ್ಕೆ ವೇಲ್ ಕಟ್ಟಿಕೊಂಡು ಬೆಟ್ಟದಿಂದ ಜಿಗಿದ ಪ್ರೇಮಿಗಳು; ಆತ್ಮಹತ್ಯೆಗೆ ಶರಣು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ