ಪ್ರಗತಿವಾಹಿನಿ ಸುದ್ದಿ, ತಿರುವನಂತಪುರಂ:
ಕೇರಳದಾದ್ಯಂತ ದಟ್ಟ ಮೋಡ ಕವಿದಿದ್ದು, ಕೆಲವೆಡೆ ಬಿರುಸಿನ ಮಳೆ ಆರಂಭವಾಗಿದೆ. ಇಂದೇ ಸಂಜೆಯೊಳಗೆ ಪೂರ್ಣ ಪ್ರಮಾಣದಲ್ಲಿ ಮುಂಗಾರು ಕಾಲಿಡಲಿದ್ದು, 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಜೂನ್ 10ರಂದು ತ್ರಿಶೂರ್ ಮತ್ತು ಎರ್ನಾಕುಲಮ್, ಜೂನ್ 11ರಂದು ಕೋಳಿಕ್ಕೋಡ್‌ನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ನಾಳೆಯಿಂದ 3 ದಿನ ತಿರುವನಂತಪುರಂ, ಕೊಲ್ಲಮ್, ಎರ್ನಾಕುಲಮ್, ತ್ರಿಶೂರ್‌ನಲ್ಲಿ ಅತೀ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ.
ಕಳೆದ ಆಗಸ್ಟ್‌ನಲ್ಲಿ ಕೇರಳದಲ್ಲಿ ಪ್ರವಾಹ ಸೃಷ್ಟಿಯಾಗಿ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಸಾವಿರಾರು ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಸಾವಿರಾರು ಕೋಟಿ ರೂ. ಆಸ್ತಿಪಾಸ್ತಿ ಹಾನಿಯಾಗಿತ್ತು. ಹಾಗಾಗಿ ಈ ಬಾರಿ ಹೆಚ್ಚಿನ ಮುನ್ನೆಚ್ಚೆರಿಕೆ ವಹಿಸುವಂತೆ ಸೂಚಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ