ಪ್ರಗತಿವಾಹಿನಿ ಸುದ್ದಿ: ನಿನ್ನೆ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಸುಮಾರು 100 ಕ್ಕೂ ಹೆಚ್ಚು ಮರಗಳು ಮುರಿದು ಬಿದ್ದು, ತಡರಾತ್ರಿಯಲ್ಲಿಯೇ ಶಾಸಕರಾದ ಕೆ.ಗೋಪಾಲಯ್ಯ ಕ್ಷೇತ್ರ ಪೂರ್ತಿ ಅಧಿಕಾರಿಗಳ ಜೊತೆ ಸಂಚರಿಸಿ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದರು.
ಭಾನುವಾರ ತಡರಾತ್ರಿ 3 ಗಂಟೆಗೆ ಮಹಾಲಕ್ಷ್ಮಿಲೇಔಟ್ ನಲ್ಲಿ 100 ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ.
ಸುಮಾರು 10ಕ್ಕೂ ಹೆಚ್ಚು ಕಡೆ ಮನೆಗಳ ಮೇಲೆ ಮರಗಳು ಬಿದ್ದಿದ್ದು, ಮನೆಯಲ್ಲಿದ್ದವರನ್ನು ಹೊರಗೆ ಕರೆತರುವ ಮೂಲಕ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದರು.
ಮಹಾಲಕ್ಷ್ಮೀ ಲೇಔಟ್‌ನ, ಕರ್ನಾಟಕ ಲೇಔಟ್, ಬೆಮೇಲ್ ಲೇಔಟ್, ಕಿರ್ಲೋಸ್ಕರ್ ಕಾಲೋನಿ ಹಾಗೂ ಕುರುಬರಹಳ್ಳಿ ಮೇನ್ ರೋಡ್, ಕಮಲ ನಗರದ ವಾಟರ್ ಟ್ಯಾಂಕ್ ಮುಖ್ಯ ರಸ್ತೆ ಮೊದಲಾದ ಕಡೆ ಹಲವಾರು ಮರಗಳು ಉರುಳಿ ಬಿದ್ದಿದ್ದು, ಬೆಳಿಗ್ಗೆಯಿಂದ ತೆರವು ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ