ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಮಹಿಳೆಯರಿಗಾಗಿ ಕೌಶಲ್ಯಾಬಿವೃದ್ಧಿ ಮತ್ತು ಉಧ್ಯಮಶೀಲತೆಯ ತರಬೇತಿü ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆಯವರ ಪ್ರಶ್ನೆಗೆ ಕೇಂದ್ರ ಕೌಶಲ್ಯಾಬಿವೃದ್ಧಿ ಮತ್ತು ಉಧ್ಯಮಶೀಲತೆಯ ಸಚಿವ ಧÀರ್ಮೇಂದ್ರ ಪ್ರಧಾನ ರವರು ಸೋಮವಾರ ಉತ್ತರಿಸಿದ್ದಾರೆ.
ಕೌಶಲ್ಯಾಬಿವೃದ್ಧಿ ಮತ್ತು ಉಧ್ಯಮಶೀಲತೆಯ ಸಚಿವಾಲಯವು ಸ್ಕಿಲ್ ಇಂಡಿಯಾ ಮಿಷನ್ ಯೋಜನೆಯಡಿಯಲ್ಲಿ ಮಹಿಳೆಯರಿಗಾಗಿ ಅಲ್ಪಾವಧಿಯ ಕೌಶಲ್ಯಗಳನ್ನು ದೇಶದಾದ್ಯಂತ ಎಲ್ಲ ಸಮಾಜದ ವರ್ಗಗಳಿಗೆ ತಲುಪಿತ್ತಿದೆ.
ಹಾಗೂ ಈ ಸಚಿವಾಲಯದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನೆ (ಪಿಎಂಕೆವಿವಾಯ್) ಯುವಕರಿಗೆ ಅಲ್ಪಾವಧಿಯ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುತ್ತಿದೆ. ಇದರಲ್ಲಿ ಎರಡು ತರಬೇತಿ ಘಟಕಗಳನ್ನು ಹೊಂದಿದೆ.
ಅಲ್ಪಾವಧಿಯ ತರಬೇತಿ ಹಾಗೂ ಪೂರ್ಣ ಕಲಿಕೆ. ಇವುಗಳ ಪ್ರಮಾಣೀಕೃತ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತಿದೆ, ಇರದಲ್ಲಿರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರಿಗ ಸಾರಿಗೆ ವೆಚ್ಚ ಹಾಗೂ ಬೋರ್ಡಿಂಗ್ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಕೌಶಲ್ಯಾಬಿವೃದ್ಧಿ ಮತ್ತು ಉಧ್ಯಮಶೀಲತೆಯ ಮೂಲಕ ಜನ್ ಶಿಕ್ಷಣ ಸಂಸ್ಥಾನ (ಜೆಎಸ್‍ಎಸ್) ಯೋಜನೆಯಡಿಯಲ್ಲಿ ಅನಕ್ಷರಸ್ಥರು, ನವ-ಸಾಕ್ಷರರು, 8ನೇ ಮತ್ತು 12ನೇ ತರಗತಿಯವರೆಗೆ, ಪ್ರಾಥಮಿಕ ಶಿಕ್ಷಣ ಹೊಂದಿರುವ ವ್ಯಕ್ತಿಗಳಿಗೆ ಮತ್ತು 15-45 ವಯಸ್ಸಿನ 12ನೇ ತರಗತಿಯವರೆಗೆ ಶಾಲೆಯನ್ನು ತೊರೆದವರಿಗೆ ಕೌಶಲ್ಯಗಳನ್ನು ನೀಡಲಾಗುತ್ತಿದೆ.
ಈ ಯೋಜನೆಯನ್ನು ಎನ್‍ಜಿಓ ಗಳ ಮೂಲಕ ವಾರ್ಷಿಕ ಆಧಾರದ ಮೇಲೆ ಕೇಂದ್ರ ಸರ್ಕಾರದಿಂದ 100% ಮೊತ್ತದ ಅನುದಾನದೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ.
2018-19 ರಿಂದ 2021-22 ರವರೆಗೆ ವಿವಿಧ ಯೋಜನೆಯಡಿಯಲ್ಲಿ ತರಬೇತಿ ಪಡೆದ ಮಹಿಳೆಯರ ಸಂಖ್ಯೆ:
ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನೆ (ಪಿಎಂಕೆವಿವಾಯ್): 2018-19ರಲ್ಲಿ 840325, 2019-20ರಲ್ಲಿ 1861063, 2020-21ರಲ್ಲಿ 878111 ಹಾಗೂ 2021-22ರಲ್ಲಿ 305219
ಜನ್ ಶಿಕ್ಷಣ ಸಂಸ್ಥಾನ (ಜೆಎಸ್‍ಎಸ್)- 2018-19ರಲ್ಲಿ 148235, 2019-20ರಲ್ಲಿ 354135, 2020-21ರಲ್ಲಿ 297899 ಹಾಗೂ 2021-22ರಲ್ಲಿ 385242
ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನೆ (ಪಿಎಂಕೆವ್ಹಿವಾಯ್)ಯಡಿಯಲ್ಲಿ 2018-19 ರಿಂದ 2021-22 ರ ಅವಧಿಯಲ್ಲಿ 38.84 ಲಕ್ಷ ಮಹಿಳಾ ಅಭ್ಯರ್ಥಿಗಳು ತರಬೇತಿ ಪಡೆದು ಅದರಲ್ಲಿ 8.68 ಲಕ್ಷ ಮಹಿಳೆಯರು ಉದ್ಯೋಗ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಎರಡು ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನೆ (ಪಿಎಂಕೆವಿವಾಯ್) ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
*ಮಹದಾಯಿ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಿಎಂ ಬಸವರಾಜ ಬೊಮ್ಮಾಯಿ*
https://pragati.taskdun.com/mahadai-issuecm-basavaraj-bommaireaction/
*ಅರುಣಾಚಲದಲ್ಲಿ ನಿಲ್ಲದ ಚೀನಾದ ಉಪಟಳ*
https://pragati.taskdun.com/arunachala-pradeshchinaissuerajanath-singh/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ