ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಬರುವ ವಿಧಾನಸಭಾ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೇಟ್ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ನೂರರ ಗಡಿಯಲ್ಲಿದೆ.
ಯೋಗ್ಯ ಅಭ್ಯರ್ಥಿಗಳ ಆಯ್ಕೆಗಾಗಿ ಈ ಬಾರಿ ವಿಧಾನಸಭಾ ಚುನಾವಣೆಯ ಕಣಕ್ಕಿಳಿಯುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೆಪಿಸಿಸಿ ನಿರ್ಧರಿಸಿದ್ದು, ನವೆಂಬರ್ 21ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿತ್ತು.
ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು ಒಟ್ಟು 80ಕ್ಕೂ ಹೆಚ್ಚು ಟಿಕೇಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಬಲ್ಯ ಪಡೆಯುವ ಪಕ್ಷ ಅಧಿಕಾರ ಹಿಡಿಯುವಲ್ಲಿ ನಿರ್ಣಾಯಕವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳ ಮಹಾಪೂರವೇ ಹರಿದು ಬಂದಿದೆ. ಜಿಲ್ಲೆಯ ಅಥಣಿಯಲ್ಲಿ 11 ಜನ ಟಿಕೇಟ್ಗಾಗಿ ಅರ್ಜಿ ಸಲ್ಲಿಸಿದ್ದರೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 9, ಸವದತ್ತಿಯಲ್ಲಿ 7, ಕಾಗವಾಡದಲ್ಲಿ 6, ಬೆಳಗಾವಿ ದಕ್ಷಿಣದಿಂದ 5, ಹುಕ್ಕೇರಿ, ನಿಪ್ಪಾಣಿ, ಅರಬಾವಿ, ಗೋಕಾಕ, ಕುಡಚಿ, ಚನ್ನಮ್ಮನ ಕಿತ್ತೂರು ಕ್ಷೇತ್ರಗಳಿಂದ ತಲಾ 4 ಜನ ಕೈ ಟಿಕೇಟ್ ಕೋರಿ ಅರ್ಜಿ ಗುಜರಾಯಿಸಿದ್ದಾರೆ.
ಖಾನಾಪುರದಲ್ಲಿ ಇಬ್ಬರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರೆ ಬೆಳಗಾವಿ ಗ್ರಾಮೀಣ, ಯಮಕನಮರಡಿ, ಚಿಕ್ಕೋಡಿ ಹಾಗೂ ಬೈಲಹೊಂಗಲದಿಂದ ಹಾಲಿ ಶಾಸಕರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ಸಲ್ಲಿಸಿದ ಪ್ರಮುಖರಿವರು
ಮಾಜಿ ಸಂಸದ ಬಿ. ಶಂಕರಾನಂದ ಅವರ ಪುತ್ರ ಪ್ರದೀಪ ಕಣಗಲಿ, ತಮಿಳುನಾಡು ಸರಕಾರದ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಶಂಭು ಕಲ್ಲೋಳಿಕರ್ ರಾಯಭಾಗ ಕ್ಷೇತ್ರದ ಟಿಕೇಟ್ ಆಕಾಂಕ್ಷಿಗಳಾಗಿದ್ದು ಅರ್ಜಿ ಸಲ್ಲಿಸಿದ್ದಾರೆ. ಹುಕ್ಕೇರಿಯಿಂದ ಮಾಜಿ ಸಚಿವ ಎ.ಬಿ. ಪಾಟೀಲ್ ಕಣಕ್ಕಿಳಿಯಲು ಅವಕಾಶ ಕೋರಿದ್ದಾರೆ. ಸವದತ್ತಿಯಿಂದ ಮಾಜಿ ಸಚಿವ ಎಚ್.ಎಂ.ರೇವಣ್ಣ ಟಿಕೆಟ್ ಕೋರಿದ್ದಾರೆ.
ಬೆಳಗಾವಿ ಉತ್ತರಕ್ಕೆ ತೀವ್ರ ಪೈಪೋಟಿ
ಮಾಜಿ ಶಾಸಕ ಫಿರೋಜ್ ಸೇಠ್, ಮಾಜಿ ಸಚಿವ ಎ.ಬಿ.ಪಾಟೀಲ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಬೈಲಹೊಂಗಲದ ಉದ್ಯಮಿ ಕಿರಣ ಸಾಧುನವರ, ಹಾಸಿಂ ಬಾವಿಕಟ್ಟಿ, ಸುಧೀರ ಗಡ್ಡೆ, ಅಜಿಂ ಪಟವೇಗಾರ ಬೆಳಗಾವಿ ಉತ್ತರ ಕ್ಷೇತ್ರದ ಟಿಕೇಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಯಮಕನಮರಡಿಯಿಂದ ಹಾಲಿ ಶಾಸಕ ಸತೀಶ ಜಾರಕಿಹೊಳಿ, ಚಿಕ್ಕೋಡಿಯಿಂದ ಹಾಲಿ ಶಾಸಕ ಗಣೇಶ ಹುಕ್ಕೇರಿ, ಬೈಲಹೊಂಗಲದಿಂದ ಹಾಲಿ ಶಾಸಕ ಮಹಾಂತೇಶ ಕೌಜಲಗಿ ಅರ್ಜಿ ಸಲ್ಲಿಸಿದ್ದಾರೆ.
ಯಾವ ಕ್ಷೇತ್ರಕ್ಕೆ ಯಾರಿಂದ ಅರ್ಜಿ ಸಲ್ಲಿಕೆ ?
ಬೆಳಗಾವಿ ಗ್ರಾಮೀಣ: ಲಕ್ಷ್ಮೀ ಹೆಬ್ಬಾಳಕರ್
ಯಮಕನಮರಡಿ: ಸತೀಶ ಜಾರಕಿಹೊಳಿ
ಚಿಕ್ಕೋಡಿ : ಗಣೇಶ್ ಹುಕ್ಕೇರಿ
ಬೈಲಹೊಂಗಲ :ಮಹಾಂತೇಶ್ ಕೌಜಲಗಿ
ಅಥಣಿ:
ಧರೆಪ್ಪ ಠಕ್ಕಣ್ಣವರ, ಬಸವರಾಜ ಬುಟಾಳಿ, ಸದಾಶಿವ ಬುಟಾಳಿ, ಶಿವಾನಂದ ಗುಡ್ಡಾಪುರ, ಗಜಾನನ ಮಂಗಸೂಳಿ, ಶ್ರೀಕಾಂತ್ ಪೂಜಾರಿ, ಸತ್ಯಪ್ಪ ಬಾಗೆನ್ನವರ, ಅಸ್ಲಂ ನಾಲಬಂದ, ಸುನೀಲ್ ಸಂಕ
ಕಾಗವಾಡ:
ರಾಜು ಕಾಗೆ, ಡಾ.ಎನ್.ಎ.ಮಗದುಮ್, ದಿಗ್ವಿಜಯ ಪವಾರದೇಸಾಯಿ, ಎಂ.ಡಿ.ಪಾಟೀಲ್, ಚಂದ್ರಕಾಂತ ದೇಸಾಯಿ,
ಕುಡಚಿ:
ಶಾಮ್ ಘಾಟಗೆ, ಮಹೇಶ್ ತಮಣ್ಣವರ, ಪ್ರಶಾಂತ ಐಹೊಳೆ
ರಾಯಬಾಗ:
ಶಂಭು ಕಲ್ಲೋಳಕರ, ಮಹಾವೀರ ಮೊಹಿತೆ, ಪ್ರದೀಪ ಮಾಳಗಿ, ಪ್ರದೀಪ ಕಣಗಲಿ ಮತ್ತಿತರರು.
ಅರಬಾವಿ:
ಅರವಿಂದ ದಳವಾಯಿ, ಭೀಮಪ್ಪಗಡಾದ, ರಮೇಶ್ ಉಟಗಿ, ಭೀಮಶಿ ಹಂದಿಗುಂದ, ಲಕ್ಕಣ್ಣ ಸವಸುದ್ದಿ
ಗೋಕಾಕ:
ಅಶೋಕ ಪೂಜಾರಿ, ಬಸನಗೌಡ ಹೊಳೆಯಾಚೆ, ಚಂದ್ರಶೇಖರ ಕೊಣ್ಣೂರ, ಪ್ರಕಾಶ ಭಾಗೋಜಿ
ಸವದತ್ತಿ:
ಎಚ್.ಎಂ.ರೇವಣ್ಣ, ವಿಶ್ವಾಸ ವೈದ್ಯ, ಸೌರವ್ ಚೋಪ್ರಾ, ಪಂಚನಗೌಡ ದ್ಯಾಮನಗೌಡರ, ಆರ್.ವಿ.ಪಾಟೀಲ್, ಉಮೇಶ್ ಬಾಳಿ
ಬೆಳಗಾವಿ ದಕ್ಷಿಣ:
ರಮೇಶ್ ಕುಡಚಿ, ಪ್ರಭಾವತಿ ಚಾವಡಿ, ರಮೇಶ್ ಗೋರಲ್, ಸಾತೇರಿ ಮಹಾದೇವ ಬೆಳವಟಕರ್, ಕುಮಾರ ಸರ್ವದೆ, ಚಂದ್ರಹಾಸ್ ಅಣ್ವೇಕರ್
ಬೆಳಗಾವಿ ಉತ್ತರ:
ಫಿರೋಜ್ ಸೇಠ್, ರಾಜು ಸೇಠ್, ವಿನಯ ನಾವಲಗಟ್ಟಿ ಎ.ಬಿ.ಪಾಟೀಲ್, ಕಿರಣ ಸಾಧುನವರ, ಹಾಸೀಂ ಭಾವಿಕಟ್ಟಿ, ಅಜೀಂ ಪಟವೇಕರ, ಸಿದ್ದಕಿ ಅಂಕಲಿ, ಸುಧೀರ ಗಡ್ಡೆ
ಖಾನಾಪುರ:
ಡಾ.ಅಂಜಲಿ ನಿಂಬಾಳ, ಇರ್ಫಾನ್ ತಾಳಿಕೋಟಿ
ಚನ್ನಮ್ಮನ ಕಿತ್ತೂರು:
ಡಿ.ಬಿ.ಇನಾಮದಾರ, ಬಾಬಾಸಾಹೇಬ್ ಪಾಟೀಲ್, ಹಬೀಬ್ ಶಿಲ್ಲೆದಾರ
ರಾಮದುರ್ಗ:
ಅಶೋಕ್ ಪಟ್ಟಣ, ರಾಜೇಂದ್ರ ಪಾಟೀಲ್, ಸಿ.ಬಿ.ಪಾಟೀಲ್, ಕೃಷ್ಣಾ ಭೂಮರೆಡ್ಡಿ, ಚಿಕ್ಕರೇವಣ್ಣ
ನಿಪ್ಪಾಣಿ:
ಕಾಕಾಸಾಹೇಬ್ ಪಾಟೀಲ್, ಲಕ್ಷ್ಮಣರಾವ್ ಚಿಂಗಳೆ, ರಾಜೇಶ್ ಕದಂ, ರೋಹನ್ ಸಾಳ್ವೆ
ಹುಕ್ಕೇರಿ:
ಎ.ಬಿ.ಪಾಟೀಲ್, ವೃಷಭ್ ಪಾಟೀಲ್, ಎಂ.ಎಂ.ಪಾಟೀಲ್, ಗಂಗಾಧರ ಗೌತಿ
ಆರೋಗ್ಯ ಸಚಿವ ಡಾ.ಸುಧಾಕರ್ ಗೆ ಸಮನ್ಸ್; ಕೋರ್ಟ್ ಆದೇಶ
https://pragati.taskdun.com/minister-sudhakarsummoncecourt-order/
ಸಿದ್ದರಾಮಯ್ಯಗೆ ಬಿಗ್ ಶಾಕ್ ಕೊಟ್ಟ ಡಿ.ಕೆ.ಶಿವಕುಮಾರ್!
https://pragati.taskdun.com/d-k-shivakumarsiddaramaiahvidhanasabha-electioncongress-ticket/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ