*ಗಣೇಶ ವಿಸರ್ಜನೆಗೆ ಮೂರು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ: ಕಮಿಷನರ್ ಭೂಷಣೆ ಬೋರಸೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶನ ವಿಸರ್ಜನೆಗೆ ಸೂಕ್ತ ಬಂದೋಬಸ್ತ್ ಒದಗಿಸಲು ಬೇರೆ ಜಿಲ್ಲೆಯಿಂದ 3 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ತಿಳಿಸಿದರು.
ತಮ್ಮ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೆ ಶನಿವಾರ ನಡೆಯಲಿರುವ ಗಣೇಶನ ವಿಸರ್ಜನೆಯ ಭವ್ಯ ಮೆರವಣಿಗೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಗಣೇಶ ವಿಸರ್ಜನೆಗೆ ನಿಯಮಗಳನ್ನು ಪಾಲಿಸಿ ಶಾಂತಿಯುತವಾಗಿ ಸಹಕರಿಸಬೇಕೆಂದು ಎಂದು ಕರೆ ನೀಡಿದರು.
ಗಣೇಶ ವಿಸರ್ಜನೆಗೆ ಐಜಿ ಕೆ.ಎಸ್.ಆರ್.ಪಿ ಅವರು ಮಾರ್ಗದರ್ಶನ ನೀಡಿದ್ದಾರೆ. 1 ಡಿಐಜಿ, 7 ಎಸ್ಪಿ ರ್ಯಾಂಕ್ ಅಧಿಕಾರಿಗಳು, 25 ಡಿವೈಎಸ್ಪಿ, 87 ಇನ್ಸಪೇಕ್ಟರ್, 250 ಪಿಎಸ್ಐ, ಎ ಎಸ್ಐ ಸೇರಿದಂತೆ ಹೆಚ್ಚುವರಿ 3 ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ವಿಸರ್ಜನಾ ಹೊಂಡಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಲೈಫ್ ಜಾಕೇಟ್ ಕೂಡ ಒದಗಿಸಲಾಗಿದೆ. 17 ಕಡೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಡಿಜೆಗೆ ಸಂಬಂಧಿಸಿದಂತೆ ಡೆಸಿಬಲ್ ನಿರ್ಧರಿಸಲಾಗಿದೆ. ಇನ್ನು ಬ್ಯಾರಕ್ ಬಳಸಿ ಕಾನೂನು ವ್ಯವಸ್ಥೆಗೆ ಆಗಮಿಸುವ ಪೊಲೀಸರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಟ್ರಾಫಿಕ್ ನಿವಾರಣೆಗೆ ಮೈಸೂರು, ಬೆಂಗಳೂರಿನಿಂದ ಟ್ರಾಫೀಕ್ ಪೊಲೀಸರು ಆಗಮಿಸಲಿದ್ದಾರೆ ಎಂದು ತಿಳಿಸಿದರು.