Latest

ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೊಂದಿದ ವಿಶ್ವದ ನಗರಗಳ ಪಟ್ಟಿ ಬಿಡುಗಡೆ

 ಪ್ರಗತಿವಾಹಿನಿ ಸುದ್ದಿ, ಲಂಡನ್: ಸಾರ್ವಜನಿಕ ಸಾರಿಗೆ, ಕೈಗೆಟಕುವ ದರ, ಕಾರ್ಯಾಚರಣೆಯ ಸಮಯ, ಜನಸಂದಣಿ ಮತ್ತು ಪ್ರಯಾಣದ ವೇಗದ ಮಾನದಂಡಗಳೊಂದಿಗೆ ವಿಶ್ವದ ಅಗ್ರ ಸ್ಥಾನದಲ್ಲಿರುವ ನಗರಗಳ ಪಟ್ಟಿ ಬಿಡುಗಡೆಯಾಗಿದೆ.

ಥಿಂಕ್ ಟ್ಯಾಂಕ್ ಆಲಿವರ್ ವೈಮನ್ ಫೋರಂನ ಹೊಸ ಅಧ್ಯಯನ ಇದನ್ನು ಬಹಿರಂಗಪಡಿಸಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಮಾನದಂಡಗಳನ್ನು ಪರಿಗಣಿಸಲಾಗಿ ಹಾಂಗ್ ಕಾಂಗ್ ವಿಶ್ವದ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ ಎಂದು ವರದಿ ಹೇಳಿದೆ.

ಹಾಂಗ್ ಕಾಂಗ್ ನಂತರ ಸ್ಥಾನಗಳಲ್ಲಿ ಕ್ರಮವಾಗಿ ಜ್ಯೂರಿಚ್, ಸ್ಟಾಕ್‌ಹೋಮ್, ಸಿಂಗಾಪುರ್, ಹೆಲ್ಸಿಂಕಿ, ಓಸ್ಲೋ, ಟೋಕಿಯೋ, ಪ್ಯಾರಿಸ್, ಬರ್ಲಿನ್, ಲಂಡನ್ ಇವೆ.

Home add -Advt

ಭಾರತದ ರಾಜಧಾನಿ ದೆಹಲಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಈ ಪಟ್ಟಿಯಲ್ಲಿ 35 ನೇ ಸ್ಥಾನದಲ್ಲಿದೆ. ಮತ್ತು ಮುಂಬೈ 41 ನೇ ಸ್ಥಾನದಲ್ಲಿದೆ.

ಖಾಸಗಿ ವಾಹಿನಿ ಕ್ಯಾಮರಾಮೆನ್ ಪತ್ನಿಯೊಂದಿಗೆ ಆತ್ಮಹತ್ಯೆ; ಕಾರಣವೇನು?

Related Articles

Back to top button