ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಅನಗೋಳದ ಕುರುಬರ ಗಲ್ಲಿಯ ಮನೆ ನಂ.೬೧೭ರ ನಿವಾಸಿಯಾದ ರಾಜು ಮಲ್ಲಾರಿ ಕರೆಗಾರ ಇವರ ಹೆಂಡತಿ ೩೬ ವರ್ಷದ ವಿಜಯಲಕ್ಷ್ಮೀ ರಾಜು ಕರೆಗಾರ ಮತ್ತು ಮಗಳಾದ ೧೭ ವರ್ಷದ ರಿಯಾ ರಾಜು ಕರೆಗಾರ ನಾಪತ್ತೆಯಾಗಿದ್ದಾರೆ.
ಜನವರಿ ೨೭ರಂದು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಸೇಂಟ್ ಜೋಸೆಫ್ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಂದಿಲ್ಲ. ನಂತರ ಸಂಬಂಧಿಗಳನ್ನು ವಿಚಾರಿಸಿದರೂ ಯಾವುದೇ ಸುಳಿವು ಇಲ್ಲದ ಬೆಳಗಾವಿ ತಿಲಕವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾಣೆಯಾದವರ ಚಹರೆಪಟ್ಟಿ: ತಾಯಿ ವಿಜಯಲಕ್ಷ್ಮೀ ೫.೨ ಪೂಟ್ ಎತ್ತರ, ಸದೃಡ ಮೈ ಕಟ್ಟು, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಎತ್ತರವಾದ ಹಣೆ, ಉದ್ದ ಮೂಗು, ಗುಲಾಬಿ ಬಣ್ಣದ ಸೀರೆ ಧರಿಸಿದ್ದು, ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾಳೆ. ಮತ್ತು ಮಗಳಾದ ರಿಯಾ ಕರೆಗಾರ ೫.೦ ಪೂಟ್ ಎತ್ತರ, ಸದೃಡ ಮೈ ಕಟ್ಟು, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಎತ್ತರವಾದ ಹಣೆ, ಉದ್ದ ಮೂಗು, ತಿಳಿ ನೀಲಿ ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.
ಸುಳಿವು ಸಿಕ್ಕಲ್ಲಿ ಬೆಳಗಾವಿ ತಿಲಕವಾಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : ೦೮೩೧-೨೪೦೫೨೩೬, ಪೊಲೀಸ್ ಇನ್ಸಪೆಕ್ಟರ ತಿಲಕವಾಡಿ ೯೪೮೦೮೦೪೦೫೨, ಪಿ.ಎಸ್.ಐ(ಕಾ ಮತ್ತು ಸು) ತಿಲಕವಾಡಿ ೯೪೮೦೮೦೪೧೧೨ ಇವರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ತಿಲಕವಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋವಾದಲ್ಲಿನ ಚುನಾವಣೆ ಕಣ ಚಿತ್ರಣವನ್ನೇ ಬದಲಿಸಿದ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ