ಪ್ರಗತಿವಾಹಿನಿ ಸುದ್ದಿ; ಕಾರವಾರ: ತಾಯಿಯೊಬ್ಬಳು ಸ್ವಂತ ಮಗಳನ್ನೇ ಅಪಹರಿಸಿರುವ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಅಪಹರಣಕ್ಕೊಳಗಾದ ಯುವತಿಯನ್ನು ರುತಿಕಾ ಎಂದು ಗುರುತಿಸಲಾಗಿದೆ. ಆರೋಪಿ ತಾಯಿ ರೂಪಾ ಶಿಸಿಕರ್ ಎಂದು ತಿಳಿದುಬಂದಿದೆ.
ರುತಿಕಾ ಇತ್ತೀಚೆಗೆ ಶಿರಸಿಯ ಬಸವೇಶ್ವರ ನಗರದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ತಾಯಿಗೆ ಮಗಳ ಪ್ರೇಮ ವಿವಾಹ ಇಷ್ಟವಿರಲಿಲ್ಲ. ಇದರಿಂದ ಕೋಪಗೊಂಡ ತಾಯಿ ರೂಪಾ ಮಗಳನ್ನು ಕಿಡ್ನ್ಯಾಪ್ ಮಾಡಿಸಿದ್ದಾಳೆ. ಮಗಳ ಮನೆಗೆ ಮೂವರು ಯುವಕರ ಗುಂಪಿನೊಡನೆ ಬಂದ ರೂಪಾ, ಮಗಳ ಮನೆಯವರಿಗೆ ಪೆಪ್ಪರ್ ಸ್ಪ್ರೇ ಎರಚಿ ಮಗಳನ್ನು ಹೊತ್ತೊಯ್ದಿದ್ದಾಳೆ.
ಈ ಸಂಬಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ರುತಿಕಾ ಪತಿ ಮಣಿಕಂಠ ದೂರು ದಾಖಲಿಸಿದ್ದಾರೆ. ಮಗಳನ್ನು ಕರೆದುಕೊಂಡು, ಕುಟುಂಬದೊಂದಿಗೆ ರೂಪಾ ಪರಾರಿಯಗೈದ್ದು, ಶೋಧ ಕಾರ್ಯ ಆರಂಭವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ