
ಪ್ರಗತಿವಾಹಿನಿ ಸುದ್ದಿ: ತಾಯಿಯೊಬ್ಬರು 14 ವರ್ಷದ ಮಗಳ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ನಡೆದಿದೆ.
ಮಗಳ ಅನಾರೋಗ್ಯಕ್ಕೆ ಬೇಸತ್ತು ಹೆತ್ತ ತಾಯಿಯೇ ಮಗಳನ್ನು ಕೊಲೆಗೈದಿದ್ದಾರೆ. ಬಳಿಕ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಸುದ್ದಿ ಕೇಳಿ ಇಡೀ ಕರಾವಳಿ ಜಿಲ್ಲೆ ಬೆಚ್ಚಿಬಿದ್ದಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರಗ ಕಾಲೋನಿಯಲ್ಲಿ ಹೆತ್ತ ತಾಯಿಯೇ ಮಗಳ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಬಳಿಕ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. 14 ವರ್ಷದ ಸುಪ್ರತಿ ತಾಯಿಯಿಂದ ಕೊಲೆಯಾದ ಮಗಳು. ನೇತ್ರಾವತಿ ಹೆತ್ತ ಮಗಳನ್ನೇ ಕೊಂದ ತಾಯಿ.
ನೇತ್ರಾವತಿ ಹಾಗೂ ಸುಧಾಕರ್ ದಂಪತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ದಂಪತಿಗೆ ಸುಪ್ರತಿ ಎಂಬ ಮಗಳು ಹಾಗೂ ಇನ್ನೋರ್ವ ಒಂದು ವರ್ಷದ ಗಂಡು ಮಗ. ಇಬ್ಬರು ಮಕ್ಕಳು. ಸುಪ್ರತಿ ಹುಟ್ಟಿದಾಗಿನಿಂದ ದಿವ್ಯಾಂಗಳಾಗಿದ್ದಳು. ತಾಯಿಯೇ ಆಕೆಯ ಆರೈಕೆ ಮಾಡುತ್ತಿದ್ದರು. .ಸದಾಕಾಲ ಆಕೆಯ ಆರೈಕೆಯಲ್ಲಿಯೇ ಇರಬೇಕಾದ ಸ್ಥಿತಿ. ಇದೇ ಕಾರಣಕ್ಕೆ ಮಗಳನ್ನು ಕೊಲೆ ಮಾಡಿರಬಹುದು ಎನ್ನಲಾಗಿದೆ.
ಕತ್ತಿಯಿಂದ ಮಗಳ ಕತ್ತು ಕೊಯ್ದು ಬಳಿಕ ಮಗಳ ಶವದ ಮುಂದೆಯೇ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಸುಧಾಕರ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




