ಡಾ. ಎ. ಮಹಾದೇವ
ಬೆಂಗಳೂರಿನಲ್ಲಿ ಗಾರ್ಮೆಂಟ್ ಗಳಲ್ಲಿ ದುಡಿಯುತ್ತಿರುವ ಅಸಂಖ್ಯಾತ ಮಹಿಳೆ, ತಾಯಂದಿರನ್ನು ನೆನಯುತ್ತಾ….
ವಿಶ್ರಾಂತಿ ಎಂಬುದು ಇಲ್ಲದೇ, ಪ್ರತಿನಿತ್ಯ ಯಾಂತ್ರಿಕ ಜೀವನವನ್ನು ನಡೆಸುತ್ತಿರುವ ಆ ಮಹಿಳೆ/ತಾಯಂದಿರು ಅನುಭವಿಸುವ ಮಾನಸಿಕ ಹಿಂಸೆ, ಕೊನೆ ಪಕ್ಷ ಕುಡಿಯಲು ಶುದ್ಧವಾದ ನೀರು, ಶೌಚಾಲಯದ ವ್ಯವಸ್ಥೆ, ಮಾಸಿಕ ಋತು ಚಕ್ರದಲ್ಲಿ ದೈಹಿಕವಾಗಿ ದಣಿವಿದ್ದರೂ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ.
ಅವಶ್ಯಕವಿದ್ದಾಗ ರಜೆ ಕೊಡದೆ ಅವರನ್ನು ಹಿಂಸಿಸುವ ಗಾರ್ಮೆಂಟ್ ಮ್ಯಾನೆಜ್ಮೆಂಟ್ ಇಷ್ಟೆಲ್ಲದರ ನಡುವೆಯೂ ಸಹ ಸರಿಯಾದ ಸಮಯಕ್ಕೆ ಸಂಬಳ ಕೊಡದೆ, ಅವರದೇ ಸಂಬಳದಲ್ಲಿ ಮಾಲೀಕರು ಭರಿಸಬೇಕಾದ ESI ಮತ್ತು PF ಕಟಾವೂ ಮಾಡಿಸಿಕೊಂಡು, ಅದನ್ನು ಸಹಿಸಿಕೊಂಡು ತಮ್ಮ ಅಸಹಾಯಕತೆಯನ್ನೆ ದೂಷಿಸಿಬೇಕಾದ ಅನಿವಾರ್ಯತೆ.
ಇಷ್ಟೆಲ್ಲಾ ಟಾರ್ಚರ್ ಸಹಿಸಿಕೊಂಡರೂ ಸಹ ಕೆಲಸದ ಅನಿಶ್ಚಿತತೆ, ಯಾವ ಸಮಯದಲ್ಲಾದರೂ ನೀನು ಕೆಲಸಕ್ಕೆ ಬರಬೇಡ ಎನ್ನುವ ಮಾಲೀಕರ ಡಿಕ್ಟೇಟರ್ ಧೋರಣೆ.
ಹೆಸರಿಗಷ್ಟೇ ಇರುವ ಲೇಬರ್ ಕಮಿಷನ್ ಕೇವಲ ಮಾಲೀಕರಿಂದ ಕಮಿಷನ್ ತಿಂದು ಗಾರ್ಮೆಂಟ್ ಜೀವನ ಅಂದರೇ ಇದೇ ವಾಸ್ತವ ಅನ್ನುವ ಹಾಗೆ ವಾತಾವರಣವನ್ನು ಕ್ರಿಯೇಟ್ ಮಾಡಿ ತಾನು ಗೊರಕೆ ಹೊಡೆಯುತ್ತಾ ಮಲಗಿದೆ.
ಹೀಗೆ ಪಟ್ಟಿ ಮಾಡುತ್ತಾ ಹೋದರೇ ಸಮಸ್ಯೆಗಳ ಸರಮಾಲೆಯ ಜೊತೆಗೆ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತೆ.
ಅದನ್ನು ಬರೆಯುವುದಿರಲಿ… ಒಂದು ಸಾಕ್ಷ್ಯಚಿತ್ರವೇ ಮಾಡಬಹುದು. ಆದರೇ ಅದು ಅವರ ಭವಣೆಗೆ ಸರಿಸಮವಾಗದು.
ಇದು ಕೇವಲ ಗಾರ್ಮೆಂಟ್ ಚಿತ್ರಣವಲ್ಲ ಅಸಂಘಟಿತ ವಲಯದ ಎಲ್ಲಾ ದುಡಿಯುವ ಕೈಗಳ ಜಿಡ್ಡುಗಟ್ಟಿದ ಹಸ್ತಗಳ ಹಿಂದಿನ ನೋವು.
ಇಂತಹ ಕಷ್ಟದಲ್ಲೂ ಸಹ ನೋವನ್ನು ತಾವೊಬ್ಬರೇ ಅನುಭವಿಸುತ್ತಾ, ತಮ್ಮ ಮಕ್ಕಳಾದರೂ ಓದಿ ಒಳ್ಳೆಯ ಕೆಲಸ ಪಡೆಯಲಿ ಎಂದು ದುಡಿಯುತ್ತಾ ಬದುಕಿನ ಬಂಡಿ ಎಳೆಯುತ್ತಿರುವ ಅಸಂಖ್ಯಾತ ತಾಯಂದಿರಿಗೆ *ತಾಯಂದಿರ ದಿನಾಚರಣೆಯಂದು ಶುಭಾಶಯ ಕೋರಬೇಕೋ ಅಥವಾ ಧನ್ಯವಾದ ಹೇಳಬೇಕೋ ಎಂದು ತಿಳಿಯದಾಗಿದೆ.
ಏನೇ ಅದರೂ ಅಂತಹ ತಾಯಂದಿರಿಗೆ ನನ್ನ ಅನಾಂತಾನಂತ ನಮಸ್ಕಾರಗಳು.
(ಲೇಖಕರು: ಉತ್ತರ ಪ್ರದೇಶದ ವಿಶ್ವವಿದ್ಯಾಲಯದ ಪ್ರೊಫ಼ೆಸರ್ )
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ