Latest
28 ವರ್ಷಗಳ ಕಾಲ ಮಗನನ್ನು ಕೂಡಿ ಹಾಕಿದ ತಾಯಿ

ಪ್ರಗತಿವಾಹಿನಿ ಸುದ್ದಿ; ಸ್ವೀಡನ್: ಇಲ್ಲೊಬ್ಬ ಮಹಿಳೆ ತನ್ನ ಸ್ವಂತ ಮಗನನ್ನೇ 28 ವರ್ಷಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿ ವಿಕೃತಿ ಮೆರೆದಿರುವ ಘಟನೆ ಸ್ವೀಡನ್ ರಾಜಧಾನಿ ಸ್ಟಾಕೋಮ್ ನ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
70 ವರ್ಷದ ಮಹಿಳೆ ಕಾನೂನು ಬಾಹಿರವಾಗಿ ಮಗನನ್ನು ಕೂಡಿ ಹಾಕಿ ಆತನಿಗೆ ದೈಹಿಕವಾಗಿ ಹಿಂಸೆ ನೀಡಿರುವ ಬಗ್ಗೆ ತನಿಖೆಯಿಂದ ಬಹಿರಂಗವಾಗಿದೆ. ಮಗ 13 ವರ್ಷದ ಬಾಲಕನಾಗಿದ್ದಾಗಲೇ ತಾಯಿ ಆತನನ್ನು ಕೂಡಿ ಹಾಕಿದ್ದಾಳೆ. ಆತನಿಗೆ 40 ವರ್ಷಗಳಾದರೂ ಮಹಿಳೆ ಆತನನ್ನು ಬಂಧನದಿಂದ ಬಿಡುಗಡೆಗೊಳಿಸಿಲ್ಲ.
ಸಂಬಂಧಿಕರೊಬ್ಬರು ಮನೆಗೆ ದಿಢೀರ್ ಭೇಟಿ ನೀಡಿದಾಗ ಈ ವಿಷಯಗೊತ್ತಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವ್ಯಕ್ತಿಯನ್ನು ಬಂಧನದಿಂದ ಬಿಡುಗಡೆಗೊಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ.




