*ವಾಹನ ಸವಾರರೆ ಗಮನಿಸಿ: ದಂಡದ ಮೊತ್ತ ತುಂಬಲು ಈ ಕೇಂದ್ರಗಳಲ್ಲಿ ಅವಕಾಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಸ್ತೆ ನಿಯಮ ಉಲ್ಲಂಘನೆಯ ಬಾಕಿ ದಂಡ ಇತ್ಯರ್ಥಗೊಳಿಸಲು ಸರ್ಕಾರ 50% ರೀಯಾಯತಿ ಜಾರಿಗೆ ತಂದಿದೆ. ಸಾರ್ವಜನಿಕರಿಗೆ ಅನೂಕುಲ ಆಗುವ ದೃಷ್ಠಿಯಿಂದ ಬೆಳಗಾವಿ ನಗರದ ವಿವಿಧ ಕಡೆ ಇ ಚಲಾನ್ ತುಂಬಿಸಿಕೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭೋಷಣ ಬೊರಸೆ ಅವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ 21/08/2025 ರ ಮೇರೆಗೆ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50% ರಷ್ಟು ರಿಯಾಯತಿ ನೀಡಿದ್ದು, ಈ ರಿಯಾಯತಿಯು ಆ 23 ರಿಂದ ಸೆ.12 ರವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿರುತ್ತದೆ.
ಕರ್ನಾಟಕ/ಬೆಳಗಾವಿ ಒನ್ ರಿಸಲ್ದಾರ ಗಲ್ಲಿ, ಕರ್ನಾಟಕ/ಬೆಳಗಾವಿ ಒನ್ ಗೋವಾವೇಸ್, ಕರ್ನಾಟಕ/ಬೆಳಗಾವಿ ಒನ್ ಅಶೋಕ ನಗರ, ಕರ್ನಾಟಕ/ಬೆಳಗಾವಿ ಒನ್ ಟಿ.ವಿ. ಸೆಂಟರ್, ಹನುಮಾನ ನಗರ, ಸಂಚಾರ ನಿರ್ವಹಣೆ ಕೇಂದ್ರ, ಪೊಲೀಸ್ ಆಯುಕ್ತರವರ ಕಚೇರಿ, ಉತ್ತರ ಸಂಚಾರ ಪೊಲೀಸ್ ಠಾಣೆ, ಪೊಲೀಸ್ ಹೆಡ್ ಕ್ವಾರ್ಟಸ್, ದಕ್ಷಿಣ ಸಂಚಾರ ಪೊಲೀಸ್ ಠಾಣೆ, ಕ್ಯಾಂಪ್, ಬೋಗಾರವೇಸ್ ಪೊಲೀಸ್ ಚೌಕಿ, ಕೋಟೆ ಕೆರೆ ಅಶೋಕ ಪಿಲ್ಲರ ಹತ್ತಿರ ಹೋಗಿ ಬೆಳಗಾವಿ ನಗರದಲ್ಲಿ ರಸ್ತೆ ನಿಯಮ ಉಲ್ಲಂಘನೆ ಮಾಡಿದರು ಬಾಕಿ ಉಳಿಸಿಕೊಂಡಿರುವ ದಂಡ ಹಣ ಪಾವತಿಸಬಹುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.