Kannada NewsKarnataka NewsLatestPolitics

*ಬಾಬ್ರಿ ಮಸೀದಿ ಆದಂತೆ ಚಿನ್ನದಪಳ್ಳಿ ಮಸೀದಿ ನಿರ್ನಾಮ; ಸಂಸದ ಅನಂತ್ ಕುಮಾರ್ ಹೆಗಡೆ ಸ್ಫೋಟಕ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಬಾಬ್ರಿ ಮಸೀದಿ ಆದಂತೆಯೇ ಭಟ್ಕಳದ ಚಿನ್ನದಪಳ್ಳಿ ಮಸೀದಿ ನಿರ್ನಾಮವಾಗುತ್ತೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ನಡೆದ ಬಿಜೆಪಿ ಕರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ, ಬಾಬ್ರಿ ಮಸಿದಿ ರೀತಿಯಲ್ಲೇ ಚಿನ್ನದಪಳ್ಳಿ ಮಸೀದಿ ನಿರ್ನಾಮ ಮಾಡುತ್ತೇವೆ. ಇದನ್ನು ಬೇಕಾದ್ರೆ ಬೆದರಿಕೆ ಅಂತ ತಿಳಿದುಕೊಳ್ಳಿ.ಚಿನ್ನದಪಳ್ಳಿ ಮಸೀದಿ ನಿರ್ನಾಮ ಮಾಡುವುದು ಗ್ಯಾರಂಟಿ ಎಂದು ಹೇಳಿದ್ದಾರೆ.

Home add -Advt

ಇದು ಕೇವಲ ನನ್ನ ತೀರ್ಮಾನ ಅಲ್ಲ. ಇಡೀ ಹಿಂದೂ ಸಮಾಜದ ತೀರ್ಮಾನ. ಚಿನ್ನದಪಳ್ಳಿಯಲ್ಲಿರುವ ಮಸೀದಿ ಇರುವ ಜಾಗ ಮೊದಲು ವಿಜಯವಿಠಲ ದೇವಸ್ಥಾನವಾಗಿತ್ತು. ಶ್ರೀರಂಗ ಪಟ್ಟಣದ ಮಸೀದಿ ಇರುವುದು ಮಾರುತಿ ದೇವಸ್ಥಾನ. ದೇವಸ್ಥಾನಗಳನ್ನು ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ. ಸಾವಿರಾರು ವರ್ಷಗಳ ಸೇಡನ್ನು ತೀರಿಸಿಕೊಳ್ಳುತ್ತೇವೆ. ಇದು ಸೇಡಿಗೆ ಸೇಡು…. ಇದು ಋಣ ಇಟ್ಟುಕೊಳ್ಳುವ ಸಮಾಜ ಅಲ್ಲ. ಋಣ ತೀರಿಸದಿದ್ದರೆ ಹಿಂದೂ ರಕ್ತ ಅಂತ ಹೇಳಲ್ಲ . ಬಾಬ್ರಿ ಮಸೀದಿ ಕೆಡವಿ ಹೇಗೆ ರಾಮ ಮಂದಿರ ನಿರ್ಮಾಣ ಮಡಿದ್ದೇವೋ ಹಾಗೇ ಚಿನ್ನದಪಳ್ಳಿ ಮಸೀದಿ ಕೆಡವಿ ದೇವಸ್ಥಾನ ನಿರ್ಮಿಸುತ್ತೇವೆ ಎಂದು ಗುಡುಗಿದ್ದಾರೆ.

ಸಂಸದ ಅನಂತ್ ಕುಮಾರ್ ಹೆಗಡೆ ಅವರ ಪ್ರಚೋದನಕಾರಿ ಹೇಳಿಕೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೊಸ ವಿವಾದವನ್ನು ಸೃಷ್ಟಿಸಿದೆ.


Related Articles

Back to top button