
ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು 28 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಖಂಡಿಸಿ ಲಂಡನ್ ನಲ್ಲಿ ಭಾರತೀಯರು ಪ್ರತಿಭಟನೆ ನಡೆಸುತ್ರ್ತಿದ್ದ ವೇಳೆ ಪಾಕಿಸ್ತಾಅ ಅಧಿಕಾರಿ ಭಾರತೀಯರಿಗೆ ಧಮ್ಕಿ ಹಾಕಿರುವ ಘಟನೆ ನಡೆದಿದೆ.
ಪಾಕಿಸ್ತಾನ ರಾಯಭಾರ ಕಚೇರಿ ಎದುರು ಲಂಡನ್ ನಲ್ಲಿರುವ ಭಾರತೀಯರು ಪ್ರತಿಭಟನೆ ನಡೆಸಿದ್ದು, ಪಹಲ್ಗಾಮ್ ನಲ್ಲಿ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರತಿಭಟನೆ ವೇಳೆ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಯೊಬ್ಬ, ಕಟ್ಟಡದ ಮೇಲೆ ನಿಂತು ಭಾರತೀಯರ ಕತ್ತು ಸೀಳುವುದಾಗಿ ಸನ್ನೆ ಮಾಡಿ ತೋರೊಸಿ ಬೆದರಿಕೆ ಹಾಕಿ ಉದ್ಧಟತನ ಮೆರೆದಿದ್ದಾನೆ.
ಪಾಕ್ ರಾಯಭಾರ ಕಚೇರಿ ಅಧಿಕಾರಿಯ ಈ ವರ್ತನೆಗೆ ಮತ್ತಷ್ಟು ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿ ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಧಿಕಾರಿಗಳ ವಿರುದ್ಧ ಮತ್ತಷ್ಟು ಪ್ರತಿಭಟನೆ ವ್ಯಕ್ತವಾಗಿದೆ.