*ಚಿಕ್ಕೋಡಿಯಿಂದ ಗೋಟೂರುವರೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಶೀಘ್ರದಲ್ಲಿ ಅನುಷ್ಠಾನ: ಸಂಸದ ಅಣ್ಣಾಸಾಹೇಬ ಜೊಲ್ಲೆ*
ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಮುರಗುಂಡಿಯಿಂದ ಚಿಕ್ಕೋಡಿವರೆಗೆ 62 ಕಿ.ಮೀ. ಅಂದಾಜು ರೂ.2000 ಕೋಟಿ ಮೊತ್ತದ ನಾಲ್ಕು ಲೈನ್ ರಸ್ತೆ ನಿರ್ಮಾಣಕ್ಕಾಗಿ ಡಿಪಿಆರ್ ವರದಿಯನ್ನು ದೆಹಲಿಯ ರಸ್ತೆ ಮತ್ತು ಸಾರಿಗೆ ಹೆದ್ದಾರಿಗಳ ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಮತ್ತು ಅದು ಶೀಘ್ರದಲ್ಲಿ ಅನುಮೋದನೆಗೊಳ್ಳಲಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ರಸ್ತೆ 548 ಬಿ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಾರಂಭಗೊಂಡು ರಾಷ್ಟ್ರೀಯ ಹೆದ್ದಾರಿ 48 ಪುಣೆ-ಬೆಂಗಳೂರು ರಸ್ತೆಗೆ ಕೂಡಿಕೊಂಡಿರುತ್ತದೆ. ಒಟ್ಟು ರಾಷ್ಟ್ರೀಯ ಹೆದ್ದಾರಿ 675 ಕಿ.ಮೀ. ಪೈಕಿ ಕರ್ನಾಟಕ ರಾಜ್ಯದ 271 ಕಿ.ಮೀ. ಪೈಕಿ 148 ಕಿ.ಮೀ. ಬೆಳಗಾವಿ ಜಿಲ್ಲೆಯಲ್ಲಿ ಹಾದು ಹೋಗಿರುತ್ತದೆ.
ಚಿಕ್ಕೋಡಿಯಿಂದ ಚಿಕ್ಕೋಡಿ ಬಾಯ್‌ಪಾಸ್ ಒಳಗೊಂಡು ಗೋಟೂರವರೆಗೆ 27 ಕಿ.ಮೀ, ಅಂದಾಜು ರೂ.1300 ಕೋಟಿ ಮೊತ್ತದ ನಾಲ್ಕು ಲೈನ್ ರಸ್ತೆ ನಿರ್ಮಾಣಕ್ಕಾಗಿ ಡಿಪಿಆರ್ ವರದಿ ತಯಾರಿಸಲಾಗಿದ್ದು ದೆಹಲಿಯ ರಸ್ತೆ ಮತ್ತು ಸಾರಿಗೆ ಹೆದ್ದಾರಿಗಳ ಸಚಿವಾಲಯಕ್ಕೆ ಸಲ್ಲಿಸಲಾಗುತ್ತಿದ್ದು ಉತ್ತರ ಕರ್ನಾಟಕ ಹಾಗೂ ಗಡಿ ಭಾಗದಲ್ಲಿ ಸುಮಾರು 16 ಸಕ್ಕರೆ ಕಾರ್ಖಾನೆಗಳಿಂದು ಇದರಿಂದ ರೈತರಿಗೆ, ಕಾರ್ಖಾನೆಯವರಿಗೆ ಹಾಗೂ ಸಾರ್ವಜನಿಕರಿಗೆ ಸಾರಿಗೆ ಅನುಕೂಲವಾಗುವಂತೆ ಸಂಸದ ಜೊಲ್ಲೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ ಗಡಕರಿ ಅವರಿಗೆ ನವದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿ ಮನವಿ/ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ. ಇದಕ್ಕೆ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಂಡು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ತಿಳಿಸಿದ್ದಾರೆ.
https://pragati.taskdun.com/d-k-shivakumarnalin-kumar-kateelramesh-jarakiholisavarkartipppu/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ