ನಾವು ಮತಾಂತರ ಮಾಡಿದ್ದ ನ್ನು ತೋರಿಸಿದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳಲು ಸಿದ್ಧ: ಡಿ ಕೆ ಸುರೇಶ್

ಪ್ರಗತಿವಾಹಿನಿ ಸುದ್ದಿ; ರಾಮನಗರ: ನಾನು ಮತ್ತು ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಇಷ್ಟು ವರ್ಷಗಳ ಅಧಿಕಾರ ಮತ್ತು ರಾಜಕೀಯ ಜೀವನದಲ್ಲಿ ಒಬ್ಬನೇ ಒಬ್ಬ ಹಿಂದುವನ್ನು ಮತಾಂತರ ಮಾಡಿದ್ದನ್ನು ತೋರಿಸಿದರೆ ನಾನು ರಾಜಕೀಯವಾಗಿ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಡಿ.ಕೆ ಸುರೇಶ್, ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಸವಾಲು ಹಾಕಿದ್ದಾರೆ.

ಇವರು ಭಾರತದ ಇತಿಹಾಸ, ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಆದರೆ ಇವರ ಮಕ್ಕಳೇ ಟ್ರಂಪ್ ಹತ್ತಿರ ಹೋಗಿ ಕೈ ಒಡ್ಡಿಕೊಂಡು ಅಮೆರಿಕಾದಲ್ಲಿ ಕೆಲಸ ಮಾಡ್ತಾರೆ. ಇನ್ನು ಇವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದ ವೇಳೆ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲಾಗಿ ಆಪರೇಷನ್‍ಗೆ ಒಳಗಾಗಿದ್ದ ವೇಳೆ ಜಾತಿ, ಧರ್ಮ ಬರೋದಿಲ್ಲ ಎಂದು ಬಿಜೆಪಿ ಹಾಗೂ ಆರ್ ಎಸ್ ಎಸ್ ಮುಖಂಡರ ವಿರುದ್ಧ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Home add -Advt

ನೀಚ ಸಂಸ್ಕೃತಿ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಕೆಂಪು ಬಟ್ಟೆ ಹಾಕಿಕೊಂಡ್ರೆ ಮಾತ್ರ ಹಿಂದೂಗಳು, ಇಲ್ಲ ಅಂದ್ರೆ ಬೇರೆಯವರು ಹಿಂದೂಗಳು ಅಲ್ಲವಾ? ಬಿಜೆಪಿ ಜೊತೆಗಿದ್ದರೆ ಮಾತ್ರ ಹಿಂದುಗಳಾ? ಕೇಸರಿ ಟವಲ್ ಹಾಕಿಕೊಂಡ್ರೆ ಮಾತ್ರ ಹಿಂದುಗಳಾ ಎಂದು ಪ್ರಶ್ನಿಸಿದ್ರು.

ರಾಜಕೀಯ ಕಾರಣಕ್ಕಾಗಿ ಕನಕಪುರದಲ್ಲಿ ಬೆಂಕಿ ಹಚ್ಚಬೇಕು ಅಂದುಕೊಂಡಿದ್ದಾರೆ. ನಾವು ಮತಾಂತರ ಮಾಡಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳಲು ಸಿದ್ಧನಿದ್ದೇನೆ.

ಕನಕಪುರದಲ್ಲಿ ಬಂದು ಭಾಷಣ ಮಾಡ್ತಾರೆ, ನಾಲಿಗೆಗೆ ಮೂಳೆ ಇಲ್ಲ ಎಂದು ಬಾಯಿಗೆ ಬಂದದ್ದನ್ನೆಲ್ಲಾ ಮಾತನಾಡುವುದಲ್ಲ, ಗಾಂಧೀಜಿ ಶಾಂತಿ ತತ್ವ ಹೇಳಿದರು. ಅಂಬೇಡ್ಕರ್ ಸಮಾನತೆ ಸಾರಿದರು. ಬಸವಣ್ಣ ಮನುಷ್ಯ ಧರ್ಮ ಅಂತೇಳಿದ್ರು. ಈ ಮೂರನ್ನು ಬಿಟ್ಟವರು ಇವರು. ಈ ಮೂರು ಇವರಿಗೆ ಲೆಕ್ಕ ಇಲ್ಲ. ಗಾಂಧೀಜಿ ಹೆಸರು ಹೇಳ್ತಾರೆ ಅದ್ರೆ ಅವರ ತತ್ವವಿಲ್ಲ, ಬಸವಣ್ಣನ ಪೂಜೆ ಮಾಡ್ತಾರೆ ಅವರ ಆದರ್ಶಗಳಿಲ್ಲ. ಅಂಬೇಡ್ಕರ್‍ರ ಸಂವಿಧಾನದ ಬಗ್ಗೆ ಹೊಗಳುವಂತ ಮಾತಾಡ್ತಾರೆ ಗೌರವಿಸುವುದಿಲ್ಲ. ಇವರು ಬಂದು ನಮಗೆ ಹಿತವಚನ ಹೇಳುವಂತಹ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

Related Articles

Back to top button