For Rent- Torgal
Emergency Service

ವಂದೇ ಭಾರತ್ ರೈಲು ಪ್ರಾರಂಭಿಸಲು ಸಂಸದ ಈರಣ್ಣ ಕಡಾಡಿ ಒತ್ತಾಯ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ, ಬೆಳಗಾವಿ-ಗೋವಾ ನಡುವೆ ಫಾಸ್ಟ್ ಪ್ಯಾಸೇಂಜರ ಮತ್ತು ಬೆಳಗಾವಿ ಪುಣೆ ನಡುವೆ ವಂದೇ ಭಾರತ್ ರೈಲನ್ನು ಪ್ರಾರಂಭಿಸಲು ಒತ್ತಾಯಿಸಿದರು.

ಜೊತೆಗೆ ಕಿತ್ತೂರಿನಲ್ಲಿ ರೈಲುಗಳ ಬಿಡಿ ಭಾಗಗಳ ತಯಾರಿಕೆಗೆ ಕಾರ್ಖಾನೆ ಪ್ರಾರಂಭಿಸುವುದು ಮತ್ತು ಮುಂಬೈ-ಗದಗ ರೈಲನ್ನು ಬಳ್ಳಾರಿವರೆಗೆ ವಿಸ್ತರಿಸಲು ವಿನಂತಿಸಿದರು.

ಸಂಸದರ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯಸಭಾ ಸಂಸದ ಕೆ. ನಾರಾಯಣ ಅವರು ಉಪಸ್ಥಿತರಿದ್ದರು.


Beereshwara 27
Bottom Ad 1
Bottom Ad 2

You cannot copy content of this page