ಮತ್ತೊಂದು ಗುಸು ಗುಸು ವಿಡಿಯೋ ವೈರಲ್; ಸಚಿವ ಮಾಧುಸ್ವಾಮಿ ವಿರುದ್ಧ ಏಕವಚನದಲ್ಲಿ ಗುಡುಗಿದ ಸಂಸದ ಬಸವರಾಜ್

ಪ್ರಗತಿವಾಹಿನಿ ಸುದ್ದಿ; ತುಮಕೂರು: ಬಿಜೆಪಿ ನಾಯಕರ ಮತ್ತೊಂದು ಗುಸು ಗುಸು ಆಡಿಯೋ-ವಿಡಿಯೋ ಸಂಭಾಷಣೆ ಭಾರಿ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ. ಕಾನೂನು, ಸಂಸದೀಯ ಸಚಿವ ಮಾಧುಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಂಸದ ಜಿ.ಎಸ್.ಬಸವರಾಜ್, ದಕ್ಷಿಣ ಆಫ್ರಿಕಾ ಕಿಂಗ್ ಪಿನ್, ನಮ್ಮ ಜಿಲ್ಲೆಯನ್ನೇ ಹಾಳು ಮಾಡಿದ್ದಾನೆ ಎಂದು ಸಚಿವ ಬೈರತಿ ಬಸವರಾಜ್ ಅವರ ಬಳಿ ಹೇಳುತ್ತಾ ಬೈದಿರುವ ಸಂಭಾಷಣೆ ಬಹಿರಂಗವಾಗಿದೆ.

ತುಮಕೂರಿಗೆ ಆಗಮಿಸಿದ್ದ ವೇಳೆ ಸುದ್ದಿಗೋಷ್ಠಿಗೂ ಮುನ್ನ ಸಂಸದ ಜಿ.ಎಸ್.ಬಸವರಾಜ್ ಹಾಗೂ ಸಚಿವ ಬೈರತಿ ಬಸವರಾಜ್ ಇಬ್ಬರೂ ಪರಸ್ಪರ ಮಾತನಾಡಿಕೊಳ್ಳುತ್ತಿದ್ದ ಸಂಭಾಷಣೆ ಇದೀಗ ವೈರಲ್ ಆಗಿದೆ. ಸಚಿವ ಬೈರತಿ ಬಸವರಾಜ್ ಬಳಿ ಮಾಧುಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಜಿ.ಎಸ್.ಬಸವರಾಜ್, ನನ್ ಮಗ ನಮ್ಮ ಇಡೀ ಜಿಲ್ಲೆ ಹಾಳು ಮಾಡಿದ್ದಾನೆ… ಮುಂದೆ ಒಂದ್ ಸೀಟ್ ಬರಲ್ಲ. ಮಾತು ಎತ್ತಿದರೆ ಹೊಡಿ ಬಡಿ ಕಡಿ ಅಂತಾನೆ. ಅವನ್ಯಾರೋ ಎಕ್ಸಿಕುಟೀವ್ ಎಂಜಿನಿಯರ್ ಗೆ ಹೇಳ್ತಾನೆ ಹೆಂಡತಿ ಸೀರೆ ಒಗೆಯಲು ಲಾಯಕ್ ಅಂತಾ…ಅವನ್ಯಾರನ್ನೋ ನಮ್ಮ ತಾಲೂಕಿಗೆ ಕರೆದುಕೊಂಡು ಬಂದ ಅವನು ಬರುವಾಗಲೇ ಒಂದು ಸಾವಿರ ಕೋಟಿ ಡಿಕ್ಲೇರ್ ಮಾಡಿಕೊಂಡು ಬಂದಿದ್ದಾನೆ.( ವಿಧಾನಪರಿಷತ್ ಅಭ್ಯರ್ಥಿಯಾಗಿದ್ದ ಲೋಕೇಶ್ ಗೌಡರನ್ನು ಸಚಿವ ಮಾಧುಸ್ವಾಮಿ ಕರೆದುಕೊಂಡು ಬಂದರು ಎಂಬ ಕಾರಣಕ್ಕೆ) ಆತ ನಮ್ಮನ್ನು ಕರೆಯಲೂ ಇಲ್ಲ, ಮಾತನಾಡಿಸಲೂ ಇಲ್ಲ…ಎಂದು ಗುಡುಗಿದ್ದಾರೆ.

ಈ ವೇಳೆ ಸಚಿವ ಬೈರತಿ ಬಸವರಾಜ್, ಸಂಸದರನ್ನು ಸುಮ್ಮನಿರಿ… ಈ ಬಗ್ಗೆ ಆಮೇಲೆ ಮಾತನಾಡೋಣ ಈಗ ಸುದ್ದಿಗೋಷ್ಠಿ ಆರಂಭಿಸೋಣ ಎಂದಿದ್ದಾರೆ. ಒಟ್ಟಾರೆ ಸಚಿವ ಮಾಧುಸ್ವಾಮಿ ವಿರುದ್ಧ ಸಂಸದರ ಅಸಮಾಧಾನ ರಾಜ್ಯ ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಚಿಂತನಾ ಶಿಬಿರ ಮುಂದೂಡಿಕೆ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button