Belagavi NewsBelgaum NewsPolitics

*ಡಿಸಿ ಜೊತೆ ವಿಶೇಷ ಸಭೆ ನಡೆಸಿದ ಸಂಸದ ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ – ಕಿತ್ತೂರು – ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಜಾಢಶಹಾಪೂರ ಹೊನಗಾ ಮತ್ತು ಹಲಗಾ ಮಚ್ಛೆ ನಡುವೆ ರಿಂಗ್ ರಸ್ತೆ ನಿರ್ಮಾಣ ಹಾಗೂ ಬೆಳಗಾವಿ ಹುನಗುಂದ – ರಾಯಚೂರು ನಡುವೆ ರಸ್ತೆ ನಿರ್ಮಾಣ ಕುರಿತು ಪರಿಶೀಲನೆಯನ್ನು ಜಿಲ್ಲಾಧಿಕಾರಿ ಎಮ್.ಡಿ ರೋಷನ್ ಇವರು ಉಪಸ್ಥಿತಿಯಲ್ಲಿ ಆಯಾ ಇಲಾಖೆಯ ಮುಖ್ಯಸ್ಥರೊಂದಿಗೆ ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಅವರು ಚರ್ಚೆ ನಡೆಸಿ, ಮಾಹಿತಿ ಪಡೆದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಭೆ ನಡೆಸಲಾಯಿತು.‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡ ಹಾಗೂ ಬಾಗಲಕೋಟೆ ಮೇಲೆ ಪ್ರಸ್ತಾಪಿತ ರಸ್ತೆಯ ನಿರ್ಮಾಣಕ್ಕೆ ಅವಶ್ಯವೆನಿಸಿರುವ ಭೂಸ್ವಾಧೀನ ಪ್ರಗತಿ ವರದಿಯನ್ನು ಆಯಾ ಭೂ ಸ್ವಾಧೀನ ಅಧಿಕಾರಿಗಳಿಂದ ಪಡೆದುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದ್ದು, ರಸ್ತೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸುವಂತೆ ಸೂಚಿಸಿದರು.

ಅದರಂತೆ ಚೋರ್ಲಾ ಮಾರ್ಗವಾಗಿ ಗೋವಾಕ್ಕೆ ತಲುಪುವ ರಸ್ತೆ ಕಾಮಗಾರಿ ಸ್ಥಿತಿಗತಿ ಬಗ್ಗೆ ತಿಳಿದುಕೊಂಡು ಕಾಮಗಾರಿ ಬೇಗನೆ ಪೂರ್ಣಗೊಳಿಸುವಂತೆ ಸೂಚಿಸಿದರು. ಇನ್ನೂ ಬೆಳಗಾವಿ ಕಿತ್ತೂರು ಧಾರವಾಡ ನೂತನ ರೈಲು ಮಾರ್ಗದ ಬಗ್ಗೆ ನಡೆಯುತ್ತಿರುವ ಭೂ ಸ್ವಾಧೀನಕ್ಕೆ ಅನುಕೂಲವಾಗುವ Demarcation ಬಗ್ಗೆ ಮಾಹಿತಿಯನ್ನು KAIDB ಧಾರವಾಡ ಅಧಿಕಾರಿಗಳಿಂದ ಪಡೆದುಕೊಂಡು ಈ ಕುರಿತು ಸಾಕಷ್ಟು ಪ್ರಗತಿ ಸಾಧಿಸಿದ್ದು, ಶೀಘ್ರ ಪೂರ್ಣಗೊಳಿಸಲು ಸಂಸದರು ಆದೇಶಿಸಿದರು.

ಈ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡದ ಭುವನೇಶಕುಮಾರ, ಬಾಗಲಕೋಟೆಯ  ಸೈಯದ್ ಅಮನ್, ವಿಶೇಷ ಭೂ ಸ್ವಾಧೀನ ಅಧಿಕಾರಿಗಳಾದ ಜೈನಾಪೂರ, ಚೌವ್ಹಾಣ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Home add -Advt

Related Articles

Back to top button