
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಇವರು ಇಂದು ಬೆಳಗಾವಿ ರಕ್ಷಣಾ ಇಲಾಖೆಯು ಸೈನಿಕನಗರ ಕಾಲೋನಿ, ಬಸವ ಕಾಲೋನಿ ಹಾಗೂ ಚೌಗುಲೆವಾಡಿಯ ಪಾಪಾಮಾಲಾ ಕಾಲೋನಿ ಸಾರ್ವಜನಿಕರ ಸಂಚಾರಕ್ಕೆ ರಕ್ಷಣಾ ಇಲಾಖೆಯಲ್ಲಿರುವ ರಸ್ತೆಗಳಿಗೆ ಗೇಟ್ ಅಳವಡಿಸಿರುವ ಸ್ಥಳಕ್ಕೆ ಭೇಟಿ ನೀಡಿದರು.
ಈ ವೇಳೆ ಮರಾಠಾ ಲೈಟ್ ಇನಫಂಟರಿ ರೆಜಿಮೆಂಟಲ್ ಸೆಂಟರ್‌ನ ಸ್ಟೇಶನ್ ಕಮಾಂಡೆಂಟ್ ಬ್ರಿಗೇಡುಯರ ಜ್ಯೂಯದಿಪ್ ಮುಖರ್ಜಿ ಅವರೊಂದಿಗೆ ಸಭೆ ಕೈಕೊಂಡು, ಅಲ್ಲಿನ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ತಿಳಿದುಕೊಂಡರು.
ಪ್ರಸ್ತಾಪಿತ ಕಾಲೋನಿಯ ನಿವಾಸಿಗಳು ರಕ್ಷಣಾ ಇಲಾಖೆಗೆ ಸೇರಿದ ಜಮೀನಿನ ಹತ್ತಿರ ಜನರು ವಾಸಿಸಲು ಕಾಲೋನಿಗಳು ಸ್ಥಾಪಿತವಿದ್ದು, ಹಲವಾರು ವರ್ಷಗಳಿಂದ ರಕ್ಷಣಾ ಇಲಾಖೆ ಈ ಜಮೀನಿನ ರಸ್ತೆಗಳ ಮುಖಾಂತರ ನಡೆದು ಹತ್ತಿರದ ಶಾಲೆ, ಆಸ್ಪತ್ರೆ, ಬಜಾರ ತಲುಪುತ್ತಿದ್ದಾರೆ. ಆದರೆ, ರಕಣಾ ಇಲಾಖೆಯ ಅಧಿಕಾರಿಗಳು, ಈ ರಸ್ತೆಗಳಲ್ಲಿ ಸಂಚರಿಸಲು ಇರುವ ಗೇಟ್ ಬಂದು ಮಾಡಿರುವುದರಿಂದ ಸಾರ್ವಜನಿಕರು ಸುಮಾರು ದೂರದ ವರೆಗೆ ನಡೆದು ಅವರು ಬಯಸಿದ ಸ್ಥಳಕ್ಕೆ ತಲುಪಬೇಕಗಿದೆ. ಇದನ್ನು ತೆರವುಗೊಳಿಸುವ ಬಗ್ಗೆ ಅಲ್ಲಿನ ನಿವಾಸಿಗಳು ಸಂಸದ ಜಗದೀಶ ಶೆಟ್ಟರ ಇವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು. ಹಾಗಾಗಿ ಇಂದು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ಸಾರ್ವಜನಿಕರ ಹಾಗೂ ರಕ್ಷಣಾ ಇಲಾಖೆ ಅಧಿಕಾರಿಗಳ ತಂಡದ ನಡುವೆ ಇರುವ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಮುಂಬರುವ ದಿನಗಳಲ್ಲಿ, ಅಗತ್ಯ ಸರಕಾರಿ ದಾಖಲಾತಿಗಳನ್ನು ಅವಲೋಕಿಸಿ ಸಾರ್ವಜಿನಿಕರಿಗೆ ಅನುಕೂಲತೆ ಕಲ್ಪಿಸಿಕೊಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಜಗದೀಶ ಶೆಟ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ