Latest

ನಾನು ಹಾಗೇ ಹೇಳಿಯೇ ಇಲ್ಲ ಎಂದ ಸಂಸದೆ ಸುಮಲತಾ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೆ.ಆರ್.ಎಸ್.ಡ್ಯಾಂ ಬಿರುಕು ಹೇಳಿಕೆ ಕಲಹ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸಂಸದೆ ಸುಮಲತಾ, ನಾನು ದಿಶಾ ಸಭೆಯಲ್ಲಿ ಪ್ರಶ್ನೆ ಮಾಡಿದ್ದೆ ಹೊರತು ಬಿರುಕು ಬಿಟ್ಟಿದೆ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಕೆ.ಆರ್.ಎಸ್ ಸುತಮುತ್ತ ನಡೆಯುತ್ತಿರುವ ಅಕ್ರಮಗಳು, ಗಣಿಗಾರಿಕೆಗಳ ಬಗ್ಗೆ ಸಭೆಯಲ್ಲಿ ಪ್ರಶ್ನೆ ಮಾಡಿದ್ದೆ. ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್.ಗೆ ಬಿರುಕು ಬಿಡುವ ಸಾಧ್ಯಎ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದೆ. ಡ್ಯಾಂ ಬಿರುಕು ಬಿಟ್ಟಿದ್ಯಾ ಎಂದು ಅಧಿಕಾರಿಗಳನ್ನು ಕೇಳಿದ್ದೆ. ನಾನು ಆತಂಕ ವ್ಯಕ್ತಪಡಿಸಿದ್ದನ್ನು ಬೇರೆ ರೀತಿಯಲ್ಲಿ ಅರ್ಥೈಸಿ ದೊಡ್ಡ ರಾದ್ದಾಂತ ಮಾಡಲಾಗುತ್ತಿದೆ. ಅಕ್ರಮಗಳನ್ನು ಬಯಲು ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

ಕೆ.ಆರ್.ಎಸ್ ಡ್ಯಾಂ ನ 20 ಕೀ.ಮೀ ಸುತ್ತ ಸ್ಫೋಟ ಮಾಡುವಂತಿಲ್ಲ. ಗಣಿಗಾರಿಕೆಯಿಂದ ಡ್ಯಾಂ ನಲ್ಲಿ ಕಂಪನ ದಾಖಲಾಗಿದೆ. ಈ ಸಂಬಂಧ ಅಧಿಕೃತ ದಾಖಲೆಗಳೂ ಇವೆ. ಈ ಬಗ್ಗೆ ಅಧಿಕಾರಿಗಳು, ಗಣಿ ಸಚಿವರು ಪರಿಶೀಲನೆ ನಡೆಸಬೇಕು. ಸ್ವತಂತ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ರಸ್ತೆ ದಾಟುತ್ತಿದ್ದ ಪುಟಾಣಿ ಮೇಲೆ ಹರಿದ ಕಾರು; 5 ವರ್ಷದ ಬಾಲಕಿ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button