ನಗರದ ವಿವಿಧೆಡೆ ಸಂಚರಿಸಿ ಜನರ ಸಮಸ್ಯೆಗೆ ಕಿವಿಯಾದ ಮೃಣಾಲ ಹೆಬ್ಬಾಳಕರ್ 

ಬೆಳಗಾವಿ :  ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಬುಧವಾರ ಸಂಚರಿಸಿದ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಜನರ ಸಮಸ್ಯೆಗಳನ್ನು ಆಲಿಸಿದರು.  ವಡಗಾವಿಯ ಕೃಷ್ಣ ಕಾಲೋನಿ ಹಾಗೂ ದೇವಾಂಗ ನಗರಗಳಿಗೆ ಭೇಟಿ ನೀಡಿ,  ರಸ್ತೆ, ಗಟಾರ ಇನ್ನಿತರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಸ್ಥಳೀಯರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಇತ್ಯರ್ಥಪಡಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.  ಈ ಸಮಯದಲ್ಲಿ ​ ಮಾಧುರಿ ಜಾಧವ್, ಬಲರಾಮ ಸಂಗೊಳ್ಳಿ, ರಾಜು ಪಾಟೀಲ​ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು​, ಸ್ಥಳೀಯ ನಿವಾಸಿಗಳು​ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.Home add -Advt … Continue reading ನಗರದ ವಿವಿಧೆಡೆ ಸಂಚರಿಸಿ ಜನರ ಸಮಸ್ಯೆಗೆ ಕಿವಿಯಾದ ಮೃಣಾಲ ಹೆಬ್ಬಾಳಕರ್