Belagavi NewsBelgaum NewsKannada NewsKarnataka NewsLatest

ನಗರದ ವಿವಿಧೆಡೆ ಸಂಚರಿಸಿ ಜನರ ಸಮಸ್ಯೆಗೆ ಕಿವಿಯಾದ ಮೃಣಾಲ ಹೆಬ್ಬಾಳಕರ್ 

ಬೆಳಗಾವಿ :  ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಬುಧವಾರ ಸಂಚರಿಸಿದ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಜನರ ಸಮಸ್ಯೆಗಳನ್ನು ಆಲಿಸಿದರು.

Home add -Advt

 ವಡಗಾವಿಯ ಕೃಷ್ಣ ಕಾಲೋನಿ ಹಾಗೂ ದೇವಾಂಗ ನಗರಗಳಿಗೆ ಭೇಟಿ ನೀಡಿ,  ರಸ್ತೆ, ಗಟಾರ ಇನ್ನಿತರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಸ್ಥಳೀಯರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಇತ್ಯರ್ಥಪಡಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು. 

ಈ ಸಮಯದಲ್ಲಿ ​ ಮಾಧುರಿ ಜಾಧವ್, ಬಲರಾಮ ಸಂಗೊಳ್ಳಿ, ರಾಜು ಪಾಟೀಲ​ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು​, ಸ್ಥಳೀಯ ನಿವಾಸಿಗಳು​ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

​ 

Related Articles

Back to top button