*ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ*: *ಕರಾವಳಿ ಭಾಗದ ಅಭಿವೃದ್ಧಿಗೆ ಹಲವು ಮಹತ್ವದ ಘೋಷಣೆಗಳು*

ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ: ಕರಾವಳಿ ಭಾಗದ ಅಭಿವೃದ್ಧಿಗೆ ಹಲವು ಮಹತ್ವದ ಘೋಷಣೆಗಳು
ಪ್ರಗತಿವಾಹಿನಿ ಸುದ್ದಿ/ ಮಂಗಳೂರು : ರಾಜ್ಯ ಸರ್ಕಾರ ಇಂದು ಮಂಗಳೂರು ನಗರದಲ್ಲಿ ನಡೆಸಿದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಪ್ರಕಟಿಸಿದೆ.
ಪ್ರಮುಖ ಘೋಷಣೆಗಳು ಈ ಕೆಳಗಿನಂತಿವೆ:
1. ಐತಿಹಾಸಿಕ ದೇವಾಲಯಗಳ ಅಭಿವೃದ್ಧಿಗೆ 12 ಕೋಟಿ ರೂ. ಮಂಜೂರು
ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕವಾಗಿರುವ 8 ಪ್ರಸಿದ್ಧ ದೇವಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಅನುದಾನ ಘೋಷಿಸಿದೆ. ಇದರಲ್ಲಿ ಒಂದು ಪ್ರಮುಖ ದೇವಾಲಯಕ್ಕೆ 5 ಕೋಟಿ ರೂ. ಹಾಗೂ ಉಳಿದ 7 ದೇವಾಲಯಗಳಿಗೆ ತಲಾ 1 ಕೋಟಿ ರೂ. ನಂತೆ ಒಟ್ಟು 12 ಕೋಟಿ ರೂ. ಮಂಜೂರು ಮಾಡಲಾಗಿದೆ.
2. ಕಡಲ್ಕೊರೆತ ತಡೆಗೆ ಕೇಂದ್ರಕ್ಕೆ 208.94 ಕೋಟಿ ರೂ. ಪ್ರಸ್ತಾವನೆ
ಕರಾವಳಿಯಲ್ಲಿ ಕಡಲ್ಕೊರೆತ ಬಹುದೊಡ್ಡ ಸಮಸ್ಯೆಯಾಗಿದ್ದು, NDRF ಮಾರ್ಗಸೂಚಿ ಅಡಿಯಲ್ಲಿ 208.94 ಕೋಟಿ ರೂ. ಬಿಡುಗಡೆಗೆ ಕೋರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಇನ್ನೂ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಒತ್ತಾಯಿಸಲು ಸಂಪುಟ ನಿರ್ಧರಿಸಿದೆ.
3. ವಿವಿಧ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ 15.50 ಕೋಟಿ ರೂ. ಅನುದಾನ
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಸ್ಥೆಗಳಿಗೆ ವಿವಿಧ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ಅನುದಾನ:
- Sayed Madani Jumma Masjid – 5.00 ಕೋಟಿ
- Al-Markazul Islami, ಅಡ್ಯಾರ್ – 1.50 ಕೋಟಿ, Darunnur Educational Centre, ಬೆಳ್ತಂಗಡಿ – 1.50 ಕೋಟಿ
- Shanti Educational Trust ಉಳ್ಳಾಲ, Marikkala Jumma Masjid ನಾರಿಂಗಾನ, KIA ಕುಂಬ್ರ, Markazul Huda Women’s College ಕುಂಬ್ರ, Salafi Movement ಮಂಗಳೂರು, St. Joseph Vaz Shrine ಮುಡಿಪು – ತಲಾ 1.00 ಕೋಟಿ
- Infant Jesus Shrine ಬಿಕರ್ನಕಟ್ಟೆ ಮತ್ತು St. Lawrence Shrine ಬೊಂದೆಲ್ – ತಲಾ 0.50 ಕೋಟಿ
4. ಮುಲ್ಕಿಯಲ್ಲಿ Fisheries Park ಗಾಗಿ 150 ಎಕರೆ ಮಂಜೂರು
ಕರಾವಳಿಯ ಮೂರು ಜಿಲ್ಲೆಗಳು 343.30 ಕಿ.ಮೀ ಕರಾವಳಿ ತೀರ ಹೊಂದಿದ್ದು ವಾರ್ಷಿಕ 7000 ಕೋಟಿ ರೂ. ಗೂ ಹೆಚ್ಚು ವಹಿವಾಟು ನಡೆಸುತ್ತಿವೆ. ಮೀನುಗಾರಿಕೆಯನ್ನು ಉತ್ತೇಜಿಸಲು ಮುಲ್ಕಿ ತಾಲೂಕಿನ ಕೊಳ್ಳೂರು, ಬಳ್ಳುಂಜೆ ಮತ್ತು ಉಳಿಪಾಡಿ ಗ್ರಾಮಗಳಲ್ಲಿ KIADB ಗುರುತಿಸಿರುವ 316.79 ಎಕರೆ ಪೈಕಿ 150 ಎಕರೆ ಜಮೀನನ್ನು Fisheries Park ಸ್ಥಾಪನೆಗೆ ಮೀಸಲಿಡಲಾಗಿದೆ. (ಸರ್ಕಾರದ ಆದೇಶ ಸಂ. CI 84 SPQ 2026, ದಿ. 17.09.2026)
5. ಮೀನು ಸಂಸ್ಕರಣಾ ಮೂಲಸೌಕರ್ಯಕ್ಕೆ 41 ಕೋಟಿ
ಮೀನುಗಾರರ ಅನುಕೂಲಕ್ಕಾಗಿ ಶೀತಲೀಕರಣ ಘಟಕ (Cold Storage) ಮತ್ತು ಇತರೆ ಮೂಲಸೌಕರ್ಯ ಅಭಿವೃದ್ಧಿಗೆ 40 ಕೋಟಿ ರೂ. ಹಾಗೂ ನಿರ್ವಹಣೆಗೆ 1 ಕೋಟಿ ರೂ. ಮಂಜೂರು.
ಈ ಎಲ್ಲಾ ಯೋಜನೆಗಳು ಕರಾವಳಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿವೆ ಎಂದು ಸರ್ಕಾರ ತಿಳಿಸಿದೆ.




